ದ್ವೇಷಕ್ಕೆ ಮೂಲ ಬಹುಶಃ ಅಸಡ್ಡೆ
ಕಾಡುತ್ತಾರ ತರತರದಲಿ
ಕನಸ ಮೊಗ್ಗುಗಳಿಗೆ
ಬೇಡುತ್ತಾರ ಇದ್ದದ್ದ ಮುಚ್ಚಿಟ್ಟು
ಮತ್ತಷ್ಟು ದುರಾಸೆಗೆ
ನಿಂದಿಸುತ್ತಾರ ಕೊಟ್ಟಷ್ಟು
ಸರಿಯಿಲ್ಲವೆಂದು ಮತ್ತಿನ್ನೇನೋ ಇರಬೇಕಿತ್ತೆಂದು
ಯಾವುದರ ಗೊಡವೆಯೇ ಬೇಡವೆಂದು
ದೂರವಿದ್ದೊಡೆ
ಕೆಣಕಿ ಕೆಣಕಿ ಬೈಯ್ಯುತ್ತಾರಾ ಜನರು
ಸಹಿಸಲಾರದೆ ಅಸಡ್ಡೆ
ದ್ವೇಷಿಸುತ್ತಾರ ಮೌನ ಮನಗಳ..
01/07/2015
No comments:
Post a Comment