Thursday, 18 July 2013

ಹನಿಗವನ

ಹೊಸ ಪ್ರಯತ್ನ

ಮತ್ತದೇ ನಿರಾಶೆ,
ಮತ್ತದೇ ಕಣ್ಣೀರ ಮಡಿಲು,
ಮತ್ತದೇ ಬರಿದಾದ ಮನ,
ಮತ್ತದೇ ವಿಧಿ ಹಳಿಯುವ ವ್ಯಸನ
ಎಂದೆಣಿಸದೆ,
ಮತ್ತೆದ್ದೇಳಬೇಕು ತನ್ನ ತಾ ಕುಂದಿಸದೆ,
ಕಳೆದ ಹಳತನ್ನು ಹಿಂದಾಕುತ
ಹೊಸ ದಾರಿ, ಹೊಸ ಬೆಳಕು,
ಹೊಸತನದ ಹೊಸ ಕನಸು,
ಹೊಸ ವ್ಯಕ್ತಿಯನ್ನಾಗಿಸುವ
ದೇವನ ಹೊಸ ಪ್ರಯತ್ನಗಳಲೀ
ಇದೂ ಒಂದೆನ್ನುತ........ :-)

-ದಿವ್ಯ ಆಂಜನಪ್ಪ
18/07/2013

2 comments:

  1. ಬದುಕಿನಲ್ಲಿ ಮೊದಲ ಪಾಠವೇ ಇದು
    "ಕಳೆದ ಹಳತನ್ನು ಹಿಂದಾಕುತ"

    http://badari-poems.blogspot.in/

    ReplyDelete
    Replies
    1. ಧನ್ಯವಾದಗಳು ಸರ್ :-)

      Delete