Wednesday, 10 July 2013

ಕವನ

ಕಾಡಿಗೆ

ಎಂದೂ ಹಚ್ಚದವಳು ನಾ
ಕಣ್ಣಿಗೆ ಕಾಡಿಗೆ, 
ಅದೇಕೊ ಅಂದು ಮನಸಾಯಿತು
ತೀಡಲು ಕಣ್ಣಿಗೆ,

ಯಾರನ್ನು ಮೆಚ್ಚಿಸಲು 
ಪ್ರಯತ್ನಿಸದೀ ಮನವು,
ಆದರೂ ಅವನ್ಯಾರೋ ಉಸುರಿದುದು
"ನೀ ಚೆಲುವೆಂದುಕೊಂಡು ತಪ್ಪಿ ತೀಡಿದೆ ಕಾಡಿಗೆ"

ದಿಕ್ಕೆಟ್ಟು ಬಂದ ಬಿರುನುಡಿಗೆ
ತಟಸ್ಥವೀ ಕಣ್ಗಳು.
ಅಂದು ಕೊಪಗೊಳ್ಳದ, ಬಿಕ್ಕಳಿಸದ
ಈ ಎನ್ನ ಮನವು ತೀಡಿಸುವುದು
ದಿನವೂ ಕಣ್ಣಿಗೆ ಕಾಡಿಗೆ.

-ದಿವ್ಯ ಆಂಜನಪ್ಪ
೧೦/೦೭/೨೦೧೩

2 comments:

  1. "ಯಾರನ್ನು ಮೆಚ್ಚಿಸಲು
    ಪ್ರಯತ್ನಿಸದೀ ಮನವು"
    ಹೀಗೆ ಎಲ್ಲರೂ ಇದ್ದಿದ್ದರೆ ದಿವ್ಯಾಜೀ ಜಗವು ಸರಳ ಸುಂದರ...

    ReplyDelete
    Replies
    1. ಹೌದು ಸರ್.
      ಧನ್ಯವಾದಗಳು ಸರ್.

      Delete