Tuesday, 4 June 2013

ಕವನ

ಹೀಗೇಕೆ?

ಗೆಳೆಯಾ,
ನೀ ದೂರವಿದ್ದರೂ
ನನ್ನಲ್ಲೇ ಇದ್ದಂತೆ,

ನೀ ಮುನಿದರೂ
ನನಗೇ ಒಲಿದಂತೆ,

ಮೌನಿಯೇ ನೀನಾದರೂ
ನನ್ನೊಡನೆ ನಿರಂತರ ಸಂಭಾಷಿಸಿದಂತೆ,

ಎಂದೆನಿಸಿದರೂ
ಮತ್ತೊಂದಿದೆ,,,

ನಡುರಾತ್ರಿ ನೀನಲ್ಲಿ ಕನವರಿಸಿದಂತೆಯೂ
ನನಗಿಲ್ಲಿ ಎಚ್ಚರವಾಗಿಬಿಡುವುದಲ್ಲಾ ???
ಹೀಗೇಕೆ? 

-ದಿವ್ಯ ಆಂಜನಪ್ಪ

04/06/2013

4 comments:

  1. ಅದೇ ಅಲ್ಲವೇ ನಿಜ ಒಲುಮೆ! :)

    ReplyDelete
    Replies
    1. ಬ್ಲಾಗಿಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದೀರ ತುಂಬಾ ಧನ್ಯವಾದಗಳು ಸರ್ :-)

      Delete