Friday, 11 October 2013

ನನ್ನ ನೋಡುತ್ತಲೇ
ಓಡುವ ಅವಳಿಗೆ
ನಾಚಿಕೆಯೇ?!
ಇಲ್ಲ ಇಣಚಿಗೂ ಬೇಸರವೇ
ನನ್ನ ಕಂಡರೆ 

************

ಇದ್ದುದರಲ್ಲಿ ಸುಖವಿರಲಿ
ಎನ್ನುವುದು ತಿಳುವಳಿಕೆಗಲ್ಲ


**********************

ಒಳಗೊಂದು ಕಚಗುಳಿ
ಕಾಣದೇ ಮುಲುಗಿರಲು
ನಗುವರು ಎಲ್ಲಾ ಹಲ್ಕಿರಿದು
ಏನಿಲ್ಲ, ಏನಿಲ್ಲ
ಹಾಗೇ ಸುಮ್ಮನೆ 

********************

ಹಿಂದೆ ಬಿದ್ದಾಗ 'ದನ'ವೆನ್ನುವ ಜನ
ಮುಂದೆ ಓಡುವಾಗ ಗೆದ್ದೆತ್ತಿನ ಬಾಲ ಹಿಡಿವರು
ದನವೆಂದಾಗ ಮುಲುಗಿ ದನಿವಡಗದಿರಲಿ
ಸಾಧನೆಯೊಳ ಗದ್ದಲವಡಗದಿರಲಿ 


12/10/2013

2 comments:

  1. ನಾನೊಬ್ಬ ಸರಳ ಸಾದಾ ಸೀದ ಮನುಷ್ಯ.ಓದುವುದು ಬರೆಯುವುದು ನನ್ನ ಪ್ರಿಯವಾದ ಹವ್ಯಾಸ.ನಿಮ್ಮ ಕಾವ್ಯಾನುಸಂಧಾನ ತುಂಬಾ ಖುಷಿ ನೀಡಿತು.ತಮ್ಮ ಸಂಕಲನವೊಂದನ್ನು ಪಡೆಯುವುದು ಹೇಗೆ?

    ReplyDelete
    Replies
    1. ನನ್ನ ಬ್ಲಾಗ್ ನನ್ನ ಪುಸ್ತಕ ಸರ್ :-)

      ಪುಸ್ತಕ ತರುವಷ್ಟು ನಾನೇನು ಬರೆದಿಲ್ಲ ಸರ್. ಮುಂದೆ ಅಂತ ಸೌಭಾಗ್ಯ ಬಂದರೆ ಖಂಡಿತ ತಮಗೆ ತಿಳಿಸುವೆ.

      ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು ಸರ್ :-)

      Delete