Wednesday, 4 December 2013


ಭರವಸೆಗಳು ಬೇಕು ಬದುಕಿಗೆ
ಅರಮನೆಯ ಹಂಬಲಿಸದೆ
ನೆರೆಮನೆಯಂಗಳವ ಮೆಟ್ಟದೆ
ತನ್ನಂಗಳವ ಹುಣ್ಣಿಮೆಯಂತೆ
ಬೆಳಗುವ ದಟ್ಟ ಬೆಳಕ ಮಾಡಲೆಂದು
ಭರವಸೆಗಳು ಬೇಕು ಬದುಕಿಗೆ


***


ಬೆಳದಿಂಗಳ ನೊರೆ ಹಾಲ ಕಂಡಾಗಿನಿಂದ 
ಚಂದಿರನ ಬೆಣ್ಣೆಯೆಂದೆಣಿಸಿ,
ಆಗಸಕೆ ದೃಷ್ಟಿ ನೆಟ್ಟು ಕಾದಿಹೆನು 
ಬೆಣ್ಣೆಯ ಕದಿಯಲು ಬರುವನೇ? 
ಕೃಷ್ಣನೆಂದು!

02/12/2013

No comments:

Post a Comment