Wednesday, 4 December 2013


ಪದ್ಯವಲ್ಲವದು ನನ್ನ ಮನಸ್ಸು
ಓದಿದರೆ ಪದಗಳಷ್ಟೇ
ಹಾಡಿದರೆ ಹಾಡು
ವಿರಹ ಮೀರಿ ಪ್ರೇಮ
ಪ್ರಣಯ ಮೀರಿ ಪ್ರೀತಿ!


***


ನೆನಪಿನಾಳಕ್ಕೆ ಹೋದಂತೆ
ಸಂಭ್ರಮಿಸುವ ಮನವು
ವಾಸ್ತವಕ್ಕೆ ಹಿಂದುರುಗಿ
ಪ್ರಶ್ನಿಸುವ ನೂರಾರು ಪ್ರಶ್ನೆಗಳಿಗೆ
ಉತ್ತರವಿಲ್ಲ;
ನನಗಿನ್ನೂ ನೀ ಅರ್ಥವಾಗಿಲ್ಲ
ಕಲ್ಪಿಸಿ ನೊಂದದಷ್ಟೇ ಆಯಿತು
ನೀ ಏನೂ ಹೇಳದೆ!
ಯಾಕೀ ಕಠಿಣ ಮನ
ಮೌನದಿ ಶಿಕ್ಷಿಸುವ ಪರಿ?

30/11/2013

No comments:

Post a Comment