Saturday 16 May 2015

ಕವನ

ಧೋ ಎನ್ನುವ ಮಳೆ 


ಹೊರಗೆ ಮಳೆ ನೆನೆದು ನಿಂತಿದೆ 
'ಧೋ' ಎಂದು
ಒಳಗೆಲ್ಲಾ ಮಬ್ಬುಗತ್ತಲೆ
ಹಿತವಾದ ಹವೆಯು ಹರಿದಾಡಿ
ಏನೋ ರೊಮಾಂಚನ ಹೇಳಲೆಂತು

ಪುಳಕಗೊಂಡಂತೆ ಒಡಲು
ಕರೆದಂತೆ ಕಿವಿ ಮಧುರ ದನಿಯು
ಮೊರೆದಂತೆ ಕಾತುರತೆ 
ಮುತ್ತು ಮಳೆ ಹನಿದು
ಅಪ್ಪುವ ಕಣ್ರಪ್ಪೆಗಳ ಮೋಹಕ ನಶೆಯು

ಗುಡುಗಿದಂತೆ, ಸಿಡಿಲು ಮೆರೆದಂತೆ
ಬಯಕೆ ಹಸಿ ಈ ಹೊತ್ತು
ಬಿಗಿದಪ್ಪಿ ಮುದ್ದಿಟ್ಟು ಕೂಡಿಡಬೇಕು
ನಾಳೆಗಳ ಕನಸುಗಳನು 
ಬಂದು ಬಿಡು ಇನ್ನು ಕಾಯಿಸದೇ... 
ಈ ಜೀವಕೆ ನಿನ್ನೆದೆ ಋಣವು..

16/05/2015

No comments:

Post a Comment