Thursday 7 May 2015

ಕವನ

ಮಾತಾಡಬೇಕು ಮೌನಗಳು..



ಈಗೀಗ ಹೆಚ್ಚು ಬಿಡುವು
ನಿನ್ನ ಧ್ಯಾನವೇ ಹೆಚ್ಚು
ಹುಚ್ಚು ಹಿಡಿಸಿಬಿಟ್ಟೆ
ಭಾವಗಳ ರಮಿಸಿ 
ಹೀಗೆ ಹಾಡಿ ಹಾಡಿ

ನಿನ್ನ ನೋಡುವ ತೀವ್ರ ಕಾತುರತೆ
ನಿನ್ನ ತಲುಪುವುದೆಂತೋ ಹುಡುಗ
ಬಿಂಕದ ಬಾಗಿಲ ಸರಿಸೋ ..
ದೋಚೆನು ಏನೂ..
ಬಾಚಿಕೊಂಡೇನಷ್ಟೇ ನಿನ್ನ ಮನವ

ನಿನ್ನೊಂದಿಗೆ ಹೆಚ್ಚು ಹರಟಿ
ತಣಿಯಬೇಕು ಮಾತುಗಳು
ದಣಿಯಬೇಕು ರಸ್ತೆಗಳು
ಕೈ ಹಿಡಿದು ನಡೆದು
ಮಾತಾಡಬೇಕು ಮೌನಗಳು ..

17/04/2015

No comments:

Post a Comment