Thursday 7 May 2015

ಕವನ

ಕನಸು

ನನ್ನ ಕನಸಿಗೆ
ಯಾರ ಬೇಲಿಯೂ
ಹಾಯಲಾರದು

ನನ್ನ ಕನಸಿಗೆ
ನನ್ನ ಕಸುವಿದೆ
ಕಣ್ಣ ಹನಿಯೂ

ಬಾನೆತ್ತೆರದ ಕನಸು ಖಜಾನೆ
ನನ್ನ ಕನಸು
ಬೇರ ಹೀರಿ ನಿಂತಿಹುದು

ಹಾರಿ ಬಂದು ತಗಲಿಕೊಂಡ
ಗಾಳಿಪಟವಲ್ಲ ನನ್ನ ಕನಸು..
ಬೇಲಿ ಹೂವಲ್ಲ, ಭಾವ ಸೆಲೆಯು ನನ್ನ ಕನಸು..

23/04/2015

No comments:

Post a Comment