Thursday 7 May 2015

ಕವನ

ವ್ಯರ್ಥ

ಹೂವೊಂದು ತನ್ನಷ್ಟಕ್ಕೆ ಅರಳಿ
ಸುಗಂಧವನ್ನು ಸೂಸಿ 
ಸೆಳೆದು ನಿಂತಾಗ
ಮುಡಿವ ಹೆಣ್ಣು ಸೊಗಸೇ 
ಅರಿಯದೆ ಜರಿವ ಬೇಲಿ
ಬಹುಶಃ ಮುಳ್ಳು

ಹೂವನ್ನು ತೆಗಳುವ 
ಹಕ್ಕುಂಟೆ ಜೀವವಿದ್ದ ಮನಸ್ಸಿಗೆ
ಸೃಷ್ಟಿಸಲಾರದವ 
ಸೃಷ್ಟಿಗೆ ಸೆಡ್ಡು ಹೊಡೆಯುವ
ನಾಟಕವೆಲ್ಲಾ ವ್ಯರ್ಥ ..

06/05/2015

No comments:

Post a Comment