Thursday 7 May 2015

ಕವನ

''ಅನ್ನದಾತನೆಂಬೋ ಕಲಿ!''

ನೇಗಿಲ ಹಿಡಿದು ಉಳುವ ಕೈಯೊಳು
ಛಾಟಿಯ ಏಟಿದು ನೋಡು ಜಗ
ಏನು ಬಿರಿಸು, ಏನು ಸೊಗಸು
ಆಹಾ ಓಡಿದೆ ಜೋಡಿ ವೃಷಭ

ಕಾಲನ ಕೈಯೊಳ ಜೀವದ ನಾಡಿ
ಏದುಸಿರಲಿ ಏರುತ ಓಡಿದೆ ನೋಡಿ
ದಿನಗಳ ಕಳೆದು, ವರುಷಗಳ ಮೆರೆದು
ತಾನೇ ಓಡುವ ಓಟದ ಭ್ರಮೆಯೊಳು ಮನುಜ

ಎಷ್ಟೆಂದರೂ ಛಾಟಿಯ ಏಟಿದೆ
ನಿಲ್ಲದ ವಾಲದ ಓಟದ ಬೇಟ,
ಜೀವವಿದೆ ಓಡುತ, ಓಡದಿರೆ ಸಾಯುತ
ಅಹಂಮ್ಮಿನ ಕೋಡ ಒನೆ-ಕೆನೆದು ಮುನ್ನುಗ್ಗತ

ಜಾರುವ ಕೆಸರೊಳು ಧೂಳಿಪಟ ದುಃಖಗಳು
ದಿಟ್ಟ ಹೆಜ್ಜೆಗಳೋ ಅವು ಮೆಟ್ಟಿದ ಧೀರತನವೋ
ಬಿರುಸಲಿ ಸಾಗಿದೆ ಆದರೂ ಬೀಗಿದೆ ಆಸೆಯ ಏರಿದೆ
ಮಾನವ ಜೀವನ ಕೊನೆಯಿಲ್ಲವೆನುತ ಮುಂದೆ ಮುಂದೆ ಸಾಗಿದೆ

ನೇಗಿಲ ಯೋಗಿಯು ಮೊದಲಾಗಿ,
ಅನ್ನದಾತನಂತೆ ನಂತರನಾಗಿ,
ಮೂರನೇ ಅವತಾರವಾಗಿ ನಿಂತಿಹನು
ಛಾಟಿಯ ಬೀಸುತ ಕಾಲನ ತೋರುತ

ಎಷ್ಟು ಸಾಮ್ಯವೋ ಈ ಓಟಗಳು,
ಓಡಿದರೂ ಈ ದನಗಳು
ಓಡುತ್ತರಿರುವವು ಜನರ ಮನಗಳು
ಎಲ್ಲಿ ಮುಟ್ಟುವುದೋ ಸಂವೇದನೆಗಳು?

ಕಾರಣವಿಲ್ಲ, ಕಾಣುವುದೂ ಇಲ್ಲ
ಮನರಂಜನೆಯ ದಾಸ್ಯವೇ ಎಲ್ಲಾ
ಕುಣಿದರೂ ಕುಣಿಯಲಿ ಮನಗಳು ಎಲ್ಲಾ
ಜಾರುತಿರುವ ಕಾಲ್ಗಳನಿಲ್ಲಿ ಛಾಟಿಯು ಗಟ್ಟಿ ಹಿಡಿವುದೇ ಇಲ್ಲ

ಓಡಿದೆ ಓಟ, ರೈತನ ಆಟ; ಸಮಯಕೆ ರಂಜನೆ 
ಕಲಿಸಿದೆ 'ಕಲಿ'ಯ ಬಗೆ ಬಗೆ ಪಾಠ
ಉಳುವ ನೇಗಿಲೆ ಆಡುವ ದನವೆ
ನಿಜ ಜೀವನದ 'ಅನ್ನ','ದಾತ'!

20/01/2015 

No comments:

Post a Comment