ಹರಿಬಿಟ್ಟೆ
ಬಚ್ಚಿಟ್ಟು, ಮುಚ್ಚಿಟ್ಟು
ಕುಳಿತಿದ್ದೆ ನಾ ಭಾವನೆಗಳ ಮೂಟೆಕಟ್ಟಿ,
ಬಿಚ್ಚಿಟ್ಟು, ಹರಿಬಿಟ್ಟೆ
ನಿನ್ನ ಕಂಡ ಕ್ಷಣದಿಂದ ಕನಸೊಂದನ ಕಟ್ಟಿ.
ಜಗವು
ನಿನ್ನ ಜಗವು ಬಹು ದೊಡ್ಡದು
ನಾನೆಲ್ಲೋ ಅದರೊಳು ಕಾಣದಂತಿದ್ದು,
ನನ್ನ ಜಗವು ಬಹು ಚಿಕ್ಕದು
ನೀ ನನ್ನೊಳಗೇ ಇರುವಂತಿದ್ದು.
ಪ್ರೀತಿ
ಮನಕ್ಕೆ ಸಿಗದದ್ದು,
ಸಿಕ್ಕಾಗ ದಕ್ಕದದ್ದು,
ಮರೆತಾಗ ನೆನೆದದ್ದು,
ಬಯಸಿದಾಗ ಪಲಾಯನವಾದದ್ದು,
ನಾ ಮುಂದೆ ನೆಡೆದಾಗ
ಹಿಂದೆ ಅತ್ತದ್ದು………
ನಿನ್ನ ಜಗವು ಬಹು ದೊಡ್ಡದು
ನಾನೆಲ್ಲೋ ಅದರೊಳು ಕಾಣದಂತಿದ್ದು,
ನನ್ನ ಜಗವು ಬಹು ಚಿಕ್ಕದು
ನೀ ನನ್ನೊಳಗೇ ಇರುವಂತಿದ್ದು.
ಹರಿಬಿಟ್ಟ ಜಗದ ಪ್ರೀತಿ ಸೊಗಸಾಗಿವೆ..!
ReplyDeleteನಿಮ್ಮ ಕಾಮೆಂಟ್ ಇನ್ನೂ ಸೊಗಸಾಗಿದೆ. ಧನ್ಯವಾದಗಳು ಸರ್ :-)
Delete