ನಿರುತ್ತರ
ಮನೆಯ ಮುಂದೆ ಯಾರದೋ ಅಂತಿಮಯಾತ್ರೆ
ದುಃಖದ ಛಾಯೆ ಮನೆಮನಗಳಲ್ಲೂ;
ಮಂಕಾದ ಮುಖ ಹೊತ್ತ ತಂದೆ
ಮಗಳಿಗೆ ಛಲ ಹುಟ್ಟಿಸಲೆಂದೋ?!
ಹಾಕಿದ ಹೀಗೊಂದು ಪ್ರಶ್ನೆ.
ಮಗಳೇ, ನನ್ನಂತ್ಯಕ್ಕಿಹರು
ಹೊಟ್ಟೆಯಲಿ ಪುಟ್ಟಿದ ಮಗನೂ-ಹೆಣ್ಣು ಮಕ್ಕಳು.
ಭಂಡ ಧೈರ್ಯದ ನಿನಗೆ
ಯಾರಿಹರು ಕೊನೆಗೆ??.,,,,,,
ದಿಗ್ಬ್ರಮೆಯಾದರೂ ನಕ್ಕಳು ಅರೆಘಳಿಗೆ,
ಮರುಕ್ಷಣ ಮೌನ,
ಕಳೆದೇ ಹೋದಳು ಬಹುಕಾಲ.
ಮನದಲಿ ಮುಗಿಯದ ಹುಡುಕಾಟ.
"ಆದಿ-ಅಂತ್ಯಗಳೆಲ್ಲಾ
ಬರೀ ಕನಸೇ,,,,,?"
ಎಚ್ಚೆತ್ತಾಗ ಅಲ್ಲಿ ಅವಳೊಬ್ಬಳೆ;
ಜೊತೆಗೆ ಫಳ್ಳನುದುರಿದ ತಣ್ಣನೆಯ ಕಣ್ಣೀರು.
-ದಿವ್ಯ ಆಂಜನಪ್ಪ
೨೮/೦೫/೨೦೧೩
ದುಃಖದ ಛಾಯೆ ಮನೆಮನಗಳಲ್ಲೂ;
ಮಂಕಾದ ಮುಖ ಹೊತ್ತ ತಂದೆ
ಮಗಳಿಗೆ ಛಲ ಹುಟ್ಟಿಸಲೆಂದೋ?!
ಹಾಕಿದ ಹೀಗೊಂದು ಪ್ರಶ್ನೆ.
ಹೊಟ್ಟೆಯಲಿ ಪುಟ್ಟಿದ ಮಗನೂ-ಹೆಣ್ಣು ಮಕ್ಕಳು.
ಭಂಡ ಧೈರ್ಯದ ನಿನಗೆ
ಯಾರಿಹರು ಕೊನೆಗೆ??.,,,,,,
ಮರುಕ್ಷಣ ಮೌನ,
ಕಳೆದೇ ಹೋದಳು ಬಹುಕಾಲ.
ಮನದಲಿ ಮುಗಿಯದ ಹುಡುಕಾಟ.
ಬರೀ ಕನಸೇ,,,,,?"
ಎಚ್ಚೆತ್ತಾಗ ಅಲ್ಲಿ ಅವಳೊಬ್ಬಳೆ;
ಜೊತೆಗೆ ಫಳ್ಳನುದುರಿದ ತಣ್ಣನೆಯ ಕಣ್ಣೀರು.
೨೮/೦೫/೨೦೧೩
ಯಾರಿಹರು ಕೊನೆಗೆ??.,,,,,,ಎಚ್ಚೆತ್ತಾಗ ಅಲ್ಲಿ ಅವಳೊಬ್ಬಳೆ;--ನಮಗೆ ನಾವೇ ಎಂದು ತಿಳಿಯಬೇಕು...
ReplyDelete:-) ಹೌದು ಮೇಡಂ.ನಮಗೆ ನಾವೇ ದಾರಿ ದೀಪಗಳು. ಧನ್ಯವಾದಗಳು.
Delete