೧*ಪ್ರೀತಿ*
ಪ್ರೀತಿಯೊಂದು ಮಾಯೆ
ಬೇಕೆನಿಸಿದಾಗ ಸಿಗದೆ,
ಬೇಡವೆಂದಾಗ ಬಿಡದೆ,
ಸೆಳೆದೇ ತೀರುತ್ತದೆ.
೨*ಬೇಸರ*
'ಬೇಸರ ಬೇಸರ'ವೆಂದು
ಬೇಸರಿಸಿ ಕಳೆದ 'ಬೇಸರವ'
ಮತ್ತೆ ಅರಸದಿರು ನನ್ನರಸಿ
ಈ 'ಸರಸ'ದ 'ಅವಸರ'ದೊಳ್.
೩*ಜೊತೆ*
ಜೊತೆಯಲಿ ಇದ್ದ,
ಜೊತೆಯಲಿ ಇಲ್ಲದ,
ಜೊತೆಯಲಿ ಇದ್ದೂ ಇಲ್ಲದಂತಿದ್ದ,
ಜೊತೆಯಾಗಲಿದ್ದ,
ಎಲ್ಲಾ ಜನರು,
ನನ್ನ ಚಿತೆಗೆ ಬೆಂಕಿಯಿಡಲು
ಈಗ ಜೊತೆಯಾಗಿದ್ದಾರೆ.
೪*ನಕ್ಕರೆ ಬಿದ್ದಳೆಂದು ತಿಳಿದವನ ಪಾಡು*
ಕಿಸಕ್ಕನೆ ನಕ್ಕಳೆಂದು
ದಬಕ್ಕನೆ ತಬ್ಬಿದೆ
ಪಟಾರನೆ ಹೊಡೆಯಲು
ಕಿಟಾರನೆ ಅರಚಿದೆ
೫*ಮರೆವು*
ಅಂದು ನನ್ನ ಮರೆಯೆಂದು
ಮರೆಯಾದವ,
ಇಂದು ನನ್ನ ನೆರೆಯಲ್ಲಿ
ಮತ್ತೆ ಕಾಣದಿರು,
ಎಂದೋ ಮರೆತವನಂತೆ ನಟಿಸುತ.
೬*ಬೇಸರ*
ನನ್ನೆಡೆಗೆ ಯಾರಿಗೂ
ಪ್ರೀತಿಯಿಲ್ಲದಿದ್ದರೂ
ನಾ ಬೇಸರಿಸಲಾರೆ,
ನನ್ನೆಡೆಗೆ ಪ್ರೀತಿ ಹೊಂದಿದವರು
ತಟಸ್ಥರಾದಾಗ
ನಾ ಬೇಸರಿಸದೆ ಇರಲಾರೆ
೭*ಆಸೆ*
ಮಾತಿನಲ್ಲಿರದ ಭಾವ
ನಿನ್ನ ಮೌನದಲ್ಲಿದೆ,
ಸಾಮಿಪ್ಯದಲ್ಲಿರದ ಸೆಳೆತ
ಈ ವಿರಹದಲ್ಲಿದೆ,
ಹೊನ್ನಿನಲ್ಲಿರದ ಹೊಳಪು
ನಿನ್ನ ಕಣ್ಣಿನಲ್ಲಿದೆ,
ನನ್ನೋಳಿಲ್ಲದ ಕನಸು
ನಿನ್ನ ಆಸೆಯಲ್ಲಿದೆ...
-ದಿವ್ಯ ಆಂಜನಪ್ಪ
ಇಷ್ಟವಾದವು...ಬರೆಯುತ್ತಿರಿ...
ReplyDeleteಧನ್ಯವಾದಗಳು ಸರ್
Deleteಮಸ್ತ್ ಮಸ್ತ್ ಹನಿಗಳು ... ಕೆಲವೊಂದು ತುಂಬಾನೇ ಇಷ್ಟವಾದವು ...
ReplyDeleteಥ್ಯಾಂಕ್ಯೂ
Deleteall are good.
ReplyDeleteಜೊತೆ....is best one!!
ಥ್ಯಾಂಕ್ಯೂ ಸರ್.
Deleteಪ್ರೀತಿ ತುಂಬಾ ಇಷ್ಟ ಆಯ್ತು....
ReplyDeletethank u :-)
Delete