Friday, 10 May 2013

ಹನಿಗವನ

"ಪ್ರೇಮ ಸಂಭಾಷಣೆ"


ಹುಡುಗ;

ನಿನ್ನಾಸೆ ಅತಿಯಾಗಿ

ಮನವೆಲ್ಲಾ ಹುಚ್ಚಾಗಿ

ಕನವರಿಕೆ ಶುರುವಾಗಿದೆ ಗೆಳೆತಿ.



ಹುಡುಗಿ;

ಮೌನವೇ ಮಾತಾಗಿ

ವಿರಹವೇ ತಪವಾಗಿ

ನಾಚಿಕೆಯೇ ಜೊತೆಯಾಗಿದೆ ಗೆಳೆಯಾ.



-ದಿವ್ಯ ಆಂಜನಪ್ಪ

2 comments:

  1. ಬಯಕೆಗಳು ಇರುವುದೇ ಹಾಗೇ....
    ಬೆಚ್ಚನೆಯ ಭಾವಗಳ ಭಾಗವಾಗಿ...
    ಕನವರಿಕೆ...ನಾಚಿಕೆಗಳ ಸಂಗಮವೇ...
    ಮಧುರ ಪ್ರೇಮ ಸಂಭಾಷಣೆ !

    ReplyDelete
    Replies
    1. ಧನ್ಯವಾದಗಳು ಸರ್. ನಿಮ್ಮ ಚುಟುಕು ಸೊಗಸಾಗಿದೆ :-)

      Delete