Friday, 23 August 2013

ಚುಟುಕು

ಈ ಎನ್ನ 
ಪ್ರಿಯ ಕನವರಿಕೆಯ
ಅವನಾಗಿ
ನನ್ನ ಅನುಭಾವ
ಮತ್ತೊಂದು ತರಹದ
ಮಧುರ 


-ದಿವ್ಯ ಆಂಜನಪ್ಪ
23/08/2013

ಚಟುಕು

ಮಿತ 
ಶಬ್ಧದಿ
ನಿನ್ನಷ್ಟೂ
ಭಾವಗಳ 
ತುಂಬಿಕೊಳುವ
ತುಡಿತ;
ನೀನಿರುವ
ಈ 
ಹೃದಯದ 
ಮಿಡಿತ 


-ದಿವ್ಯ ಆಂಜನಪ್ಪ
23/08/2013

ಚುಟುಕು

ನಿನ್ನ 
ಮನಮೋಹಕ
ಮಾಯಾ ಜಾಲದಿ
ಸೆರೆ ಸಿಕ್ಕ 
ಮಿಣುಕು 
ಮೀನು
ನಾನು 


-ದಿವ್ಯ ಆಂಜನಪ್ಪ

22/08/2013

ಚುಟುಕು

ಕಾಗೆಯೆಂದು
ಕುಹುಕವಾಡಿ
ಅದರ ಕಾವಲೇ
ಮರಿಯ ಮಾಡಿ
ಹಾರುತಿರೆ
ತನ್ನದೆನುವ
ಕಪಟಿಯೇ
ಕೋಗಿಲೆ 

-22/08/2013

Wednesday, 21 August 2013

ಚುಟುಕು

ಎನ್ನ ಭಾವದ
ಹೊರಚಾಚಿಕೆಗಳೆಲ್ಲಾ
"ತನ್ನ ಕುರಿತಾಗಿಯೇ"
ಎನುವ ಅವನ ಭಾವ
ನನ್ನೆಲ್ಲಾ ಪ್ರಶ್ನೆಗಳಿಗೆ
ಉತ್ತರ....
 — feeling ಯುರೇಕಾss.....


-ದಿವ್ಯ ಆಂಜನಪ್ಪ
21/08/2013

ಹನಿಗವನ

"ಅಂತರಾತ್ಮವಿಲ್ಲದ ಪರಮಾತ್ಮ"

ಜೋಗಿ ಜಂಗಮರಿಗೂ
ಒಂದು ನೆಲೆಯುಂಟು
ಮಾತಿಗೆ ನಿಲುಕದ
ಆಧ್ಯಾತ್ಮ;
ಭೋಗಿ ವಿಲಾಸಿಗಿಲ್ಲ
ತನ್ನದೆನ್ನುವ
ಅಂತರಾತ್ಮ;
ನಿರಂತರ ಸಂಚಾರಿ
ಚಂಚಲಿತ ಮನ
ತನ್ನೊಳಗೇ ತಾ ಅವಿತು
ಕೂತ ಪರಮಾತ್ಮ.

-ದಿವ್ಯ ಆಂಜನಪ್ಪ
21/08/2013
 — feeling ಹತಾಶೆ.

Tuesday, 20 August 2013

ಚುಟುಕು

ಸೈರಿಸದ 
ಮನ
ಸೇರಿಸಿ 
ನೋಡುವದು
ಇಲ್ಲದ 
ಅವಗುಣ


21/08/2013

ಚುಟುಕು

ತೊಡಕುಗಳೆಂದು ದೂರ ಸರಿಸಿದ
ಅದೆಷ್ಟೋ ಎಳೆಗಳ;
ಮತ್ತೆ ಹುಡುಕುವಂತೆ ಮಾಡಿವೆ
ಈ ಹೊಸ ಬಗೆಯ ಹೊಡೆತಗಳು 

-ದಿವ್ಯ ಆಂಜನಪ್ಪ
20/08/2013

ಚುಟುಕು

ತಟ್ಟೆಯಲ್ಲಿನ 
ಅನ್ನದಗುಳಿಗೂ
ಹಸಿವೆಯಂತೆ
ಹಸಿದವನ ಹೊಟ್ಟೆ
ಸೇರಬೇಕೆಂಬ...

-ದಿವ್ಯ ಆಂಜನಪ್ಪ
೨೦/೦೮/೨೦೧೩

ಚುಟುಕು

ಬುದ್ಧಿ ಮಾತ ಕೇಳಿ 
ಭಾವ ಬಂಧಿಸುವುದು
ನನಗೆ ನಾ ಕೊಟ್ಟ 
ಶಿಕ್ಷೆ 


19/08/2013

Monday, 19 August 2013

ಚುಟುಕು

ಬದುಕೊಂದು ಭಾವಗೀತೆ
ಮನದುಂಬಿ ನೀ ಹಾಡು
ರಾಗ ವ್ಯತ್ಯಾಸವಾದರೂ
ಭಾವಗೆಡದಿರಲಿ ಅಪಚಾರವಾಗಿ

-ದಿವ್ಯ ಆಂಜನಪ್ಪ
19/08/2013

ಚುಟುಕು

ನೆಡೆವ ದಾರಿಯೊಳ್
ಸಿಗುವುದೈ ನೂರ್ಚರಂಡಿಗಳ್
ದಾಟುವೆಯಾದರೆ ನೀ ಮಡಿ
ನಿಂತು ದೂಷಿಸುವೆಯಾದೊಡೆ
ಮೂರ್ಖರೆನ್ವರು ;
ಗುದ್ದಾಡುವುದಾದರೂ
ಗಂಧದೊಡನೆ ಗುದ್ದಾಡೆಂದು 

-ದಿವ್ಯ ಆಂಜನಪ್ಪ
19/08/2013

Sunday, 18 August 2013

ಚುಟುಕು

ಹಾಗೇ ಸುಮ್ಮನೆ...... 

ನೀ ಬದುಕಿಗೆ ಬಂದು 
ಭಾವವಾದೆಯೋ
ಇಲ್ಲ
ಭಾವದಲಿ ಮಿಂದು
ಬದುಕಾದೆಯೋ
ತಿಳಿಯದು ನನಗೀಗ;
ನಿರ್ಭಾವುಕತೆಯ ಪರದೆ ಸರಿಸಿ
ತಿಳಿಸು ಬಾ
ನಾನರಿಯೆ
ನಿನ್ನ
ಮೌನದ ಮರ್ಮವ.

-ದಿವ್ಯ ಆಂಜನಪ್ಪ
18/08/2013

ಚುಟಿಕು

ಹಾಗೇ ಸುಮ್ಮನೆ... :-)

ಅಪ್ಪಿ-ತಪ್ಪಿ
ಕನಸಲಿ
ನಾ
ಕೊಟ್ಟ
ಪಪ್ಪಿ
ವಾಪಸ್ ಕೊಟ್ಬಿಡು
ಅಪ್ಪ ಬೈತಾರೆ!! :-)

18/08/2013

ಚುಟುಕು

ಹಾಗೇ ಸುಮ್ಮನೆ.......... :-)

ಮನದ ಬಿಂಬ 
ನಯನ
ಸೋತವೋ 
ನೆನೆನೆನೆದು 
ನೆನೆದವೋ 
ನಿನ್ನ ನೆನಪಿನಲಿ

-ದಿವ್ಯ ಆಂಜನಪ್ಪ
18/08/2013

Saturday, 17 August 2013

ಚುಟುಕು

ಮೌನ ಪ್ರೀತಿ;
ಇದೊಂದು ತರಹದ ವಿರಹ!
ವಿರಹದಲ್ಲೊಂದು ಕವನ
ಅದು ಅವನ ಪ್ರೀತಿಯದೇ ಗುಣಗಾನ :-)

-ದಿವ್ಯ ಆಂಜನಪ್ಪ
17/08/2013

ಹನಿಗವನ

"ಸೇವಂತಿ ಚೆಂಡು"

ಇಳಿ ಸಂಜೆಯಲಿ
ತಿಳಿ ಮೋಡಗಳ 
ಮರೆಯಲಿ
ಅವಿತ ಅವನು;
ಮತ್ತೆ ಸೆಳೆಯುವನು
ಸೇವಂತಿ ಚೆಂಡಿನ
ಹೊಸ ಚಿತ್ರದಲಿ,
ಕಣ್ಗಳು ತಂಪಾಗುವ ಘಳಿಗೆಯಲಿ
ಹೊರಗೆಲ್ಲೋ ಹೂವಾಡಿಗನ ಕೂಗು
ಸೇವಂತೀss......

-ದಿವ್ಯ ಆಂಜನಪ್ಪ
17/08/2013

Friday, 16 August 2013

ಚುಟುಕು

ಹಕ್ಕಿಯಂತಹ ಮನಸ್ಸಿಟ್ಟುಕೊಂಡು
ಮುರಿಯಲಾರೆ ಕನಸ ರೆಕ್ಕೆಗಳ
ತರಿಯಲಾರೆ ಭಾವದ ಪುಕ್ಕಗಳ
ಕೂರಲಾರೆ ನಾ ಹಾರದ ಹಕ್ಕಿಯಾಗಿ
ಈ ಜಗದ ಕ್ರೂರತೆಗೆ ಒಳಗಾಗಿ ಬಲಿಯಾಗಿ.

-ದಿವ್ಯ ಆಂಜನಪ್ಪ
16/08/2013

ಹನಿಗವನ

*ಮೇಘ ಮಾಲೆ*

ಮೇಘಮಾಲೆಯ ಸರದಾರ ನನ್ನ ನಲ್ಲ
ಮಿಂಚುವನು ಮೊದಲು ಎಚ್ಚರಿಸಲೆಂದೇ
ಗುಡುಗುವನು ದೂರದಿ ನಾ ಬೆಚ್ಚುವಂತೆ;
ಮಿಡಿದು ಕರಗುವನು ತನ್ನೆಡೆಗೆ ಮೌನಿಯಂತೆ,
ಪ್ರೇಮದ ಮಳೆಗರಿವನು ತನ್ಮಯದಿ ಜೀವದಂತೆ,
ಮೋಹದಿ ಬೆಳಗುವನು ಕಾಮನಬಿಲ್ಲಾಗಿ;
ನಿರ್ಮಲ ಮನದ ಬಾಂದಳದಿ ಜ್ಯೋತಿಯಂತೆ.

-ದಿವ್ಯ ಆಂಜನಪ್ಪ
16/08/2013
 

Thursday, 15 August 2013

ಚುಟುಕು

ಅವ ಮತ್ತೂ
ಉಳಿದಾನೋ
ಗಾಳಿಯಲಿ
ತೇಲುವ
ಆಮ್ಲಜನಕದಂತೆ
ಬಿಡಲಾರೆನು
ತಬ್ಬಿ ಹಿಡಿಯಲಾರೆನು.... :-)

-ದಿವ್ಯ ಆಂಜನಪ್ಪ
15/08/2013 :-)

ಚುಟುಕು

ಹಗುರಾದಂತೆ 
ಹೇರಿಸುತ್ತಲಿರುವ
ಜೀವನ; 
ತೂಗಿದೆ ತಕ್ಕಡಿಯಾ
ನಾನೋ ಇಲ್ಲ 
ಆ ಒತ್ತಡಗಳೋ?

-ದಿವ್ಯ ಆಂಜನಪ್ಪ
15/08

ಚುಟುಕು

ಹಾಗೇ ಸುಮ್ಮನೆ..... :-)

ಹೃದಯವು ಹಾಡಲು
ಮನದೊಳು ಗೆಲುವಿರಬೇಕು
ಒಲವು ಅಳಿದರೂ
ನಯನವು ಅರಳಿರಬೇಕು

-ದಿವ್ಯ ಆಂಜನಪ್ಪ
15/08/2013

ಚುಟುಕು

ಕಂಡರೆದೆಗೆ 
ಚೂರಿ ಮೊನೆಯ
ಗುರಿಯಿಡುವವರು
ಮರೆತಾರೋ
ತಮ್ಮೆದೆಯಲೊಂದು 
ಹೃದಯ ಮಿಡಿವುದೆಂದು 

-ದಿವ್ಯ ಆಂಜನಪ್ಪ
15/08/2013

Wednesday, 14 August 2013

ಚುಟುಕು

ಕೈಗೆಟುಕದ 
ಕಾಮನಬಿಲ್ಲಿಗೂ
ಆಸರೆ 
ಆ ನೇಸರನು;
ನೇಸರನು 
ಸರಸದಿ ಬೆರೆಸಿದ 
ಬೆಳಕನು;
ಅಂತರಂಗದಿ ಮೂಡಿಸಿದೆ 
ಏಳು ನೆರಗನು;
ಹೆತ್ತ ತಾಯಂತೆ 
ಮೋಡಗಟ್ಟಿದ ಮುಗಿಲು.

-ದಿವ್ಯ ಆಂಜನಪ್ಪ
14/08/2013

ಚುಟುಕು

ಮಳೆ 
ನಿಂತ ಮೇಲೂ,
ಉದುರುವ 
ಮರದೆಲೆ 
ಹನಿಗಳಂತೆ;
ನಿನ್ನ ನೆನಪಿನ
ಈ
ಹನಿಗಳು... 

-ದಿವ್ಯ ಆಂಜನಪ್ಪ
14/08/2013

ಹನಿಗವನ

ಪರಿತಪಿಸುವ ಮನ
ಹತಪತ ಸುತ್ತುವ ವ್ಯಸನ
ಇಲ್ಲದ ಆಸೆಗಳ ತನನ
ಎಲ್ಲೆಲ್ಲೋ ತೃಪ್ತಿ ಕಾಣುವ ಜತನ
ಮನವೇ ತಾಳು ನೀ ನಿಧಾನ
ನೀಯತ್ತಿನ ಪಾಯವಿಲ್ಲದ ನಿನ್ನ ಸದನ
ಹರಕು-ಮುರುಕು ಜೋಪಡಿಗೆ ಸಮಾನ.

-ದಿವ್ಯ ಆಂಜನಪ್ಪ



೧೪/೦೮/೨೦೧೩

Tuesday, 13 August 2013

ಚುಟುಕು

ಹಾಗೇ ಸುಮ್ಮನೆ...

ಮಂಜು ಕರಗಿತು
ಕಲ್ಲು ಕರಗಿತು 
ವಜ್ರದಂತಹ ವಜ್ರವೇ ಕರಗಿತು
ಪ್ರೀತಿಯ ರೀತಿಗೆ;
ಮಾನವನೆದೆಯ 
ಅಹಂ ಕರಗದು 
ಪ್ರೀತಿ ನಿರೋಧಕ ಶಕ್ತಿ 
ಅದೊಂದಕಷ್ಟೇ ಇದೆ....... :-)

-ದಿವ್ಯ ಆಂಜನಪ್ಪ
13/08/2013 :-)

ಚುಟುಕು

ಸೊಬಗನರಿತ ಜನ 
ಕಾಡುಮಲ್ಲಿಗೆ ಎಂದರು
ಇದ್ಯಾವ ಪರಿವೆಯಿಲ್ಲದ ಮಲ್ಲೆ 
ದಿನವೂ ಬಿರಿವುದು ತನ್ನ ಸಹಜತೆಯಂತೆ 


-ದಿವ್ಯ ಆಂಜನಪ್ಪ
13/08/2013

Monday, 12 August 2013

ಹನಿಗವನ

ಕಹಿ ವಾಸ್ತವ
ಹಿಡಿಸದಿದ್ದರೆ,
ಸಿಹಿ ಕಲ್ಪನೆಗಳಲಿ
ಬದುಕಿಸಬಹುದು ಭಾವಗಳ;
ಆದರೆ,
ವಾಸ್ತವಕ್ಕೆ ಎಳೆತರಬಾರದು
ಆ ಕಲ್ಪಿತ
ಭಾವಗಳ........... :-)

-ದಿವ್ಯ ಆಂಜನಪ್ಪ

೧೨/೦೮/೨೦೧೩

Saturday, 10 August 2013

ಹನಿಗವನ

ಪ್ರಿಯಕರೆಯೊಂದು ಕೇಳಿ ಬಂದು,
ಹರ್ಷಿಸಿ ಕರೆದೆಡೆಗೆ ತಾನೂ ಕೂಗಿ;
ಆ ಪ್ರತಿ ಕೂಗೇ ತನ್ನೊಳ ಒಲವೆಂದು,
ಓಡೋಡಿ ಹೋಗಿ ನೋಡಲು;
ಅದೇ ಕಡಿದಾದ ಪ್ರಪಾತ...
ಮುಖದಿಂದಿಳಿದ ಬೆವರ ಹನಿಗಳೇ
ಎಚ್ಚರಿಸಿ ಅರಿವು ಮೂಡಿಸಿದವು
ಮೊದಲ ಕರೆಯೊಂದು ಭ್ರಮೆ
ಎರಡನೇಯದು ಅದು ನಿನ್ನದೇ ಪ್ರತಿಧ್ವನಿ.

-ದಿವ್ಯ ಆಂಜನಪ್ಪ
28/07/2013

Friday, 9 August 2013

ಚುಟುಕು

ನಾನೊಂದು ಬಿಳಿಯ ಹಾಳೆ
ಬಯಸಿದರೂ ಬರೆಯಿಸಿಕೊಳ್ಳದವಳು,
ನೀ ಜೊತೆಯಾದೆ ಲೇಖನಿ;
ಎನ್ನ ಭಾವಕ್ಕೆ ಜೀವವಾಗಿ,
ನೀ ಮೂಡಿಸಿದ ಚಿತ್ತಾರವು
ನೀನಿಟ್ಟ ನನ್ನೊಡಲ ಪ್ರೇಮ ಕಾವ್ಯ :-)

-ದಿವ್ಯ ಆಂಜನಪ್ಪ
09/08/2013
ಹಾಗೇ ಸುಮ್ಮನೆ...... 

ಬಾಳ್ವದು ಮೂರ್ಕಾಲ,
ಬಾಯ್ವದು ನುಡಿವುದೈ
ಉಳಿವಂತೆ ನೂರ್ಕಾಲ 

-ದಿವ್ಯ ಆಂಜನಪ್ಪ
08/08/2013

Thursday, 8 August 2013

ಚುಟುಕು

ನನ್ನದು 'ಅಹಂ'
ಎಂದುಕೊಂಡರೂ ಸರಿಯೇ
ಅದು ನನ್ನ 'ಸ್ವಾಭಿಮಾನ'
ಸೆಟೆದು ನಿಂತ ನಿನ್ನ 
ರಮಿಸದಿರುವುದು.

-ದಿವ್ಯ ಆಂಜನಪ್ಪ
09/08/2013

ಹನಿಗವನ

ವಯಸ್ಸಿನ ಉನ್ಮಾದದಿ
ಮೂಡುವ ಶೃಂಗಾರ,
ಕನಸಿನ ಕನವರಿಕೆಯಲಿ
ತೇಲುವ ಚಿತ್ತಾರ,
ಮಥಿಸಿದ ಮನಸಿನಲಿ
ಬೆಣ್ಣೆಯೋಪಾದಿ ಸಂಸ್ಕಾರ,
ವಿಕಸಿತ ವ್ಯಕ್ತಿತ್ವದಿ
ಹೂ ಬಿಟ್ಟ ಚಿತ್ತಾರ, ಸಂಸ್ಕಾರ, ಶೃಂಗಾರ ಕಾವ್ಯ.

-ದಿವ್ಯ ಆಂಜನಪ್ಪ :-)
09/08/2013 

ಚುಟುಕು

ಅನೀತಿ ಅಕ್ರಮಗಳಿಗೆ ಮನ ಸೋಲದ ಮನ
ಕಡೆಗೂ ತಾ ಅಸುಖಿಯಾದರೂ ನೆಮ್ಮದಿಯೇ,
ಜೀವನದುದ್ದಕ್ಕೂ ಹೊರಾಟವೇ ಆದರೂ
ದುರಂತ ನಾಯಕಿಯೆಂಬ ಪಟ್ಟವೂ ಹೆಮ್ಮೆಯೇ;
ನಾಟಕಗಳಲಿ ರುದ್ರ ನಾಟಕ ಶ್ರೇಷ್ಟವಂತೆ!!

-ದಿವ್ಯ ಆಂಜನಪ್ಪ
08/08/2013 

ಚುಟುಕು

ಸೋಲಲೂ ಬೇಕು ಸಾಮರ್ಥ್ಯ;
ಸೋಲರಗಿಸಿಕೊಳ್ಳಲು,
ಜಯದ ಬೆನ್ನಲ್ಲೇ ಇರುವ ಸೋಲನು
ಹಿಂದುರುಗಿ ನೋಡಿದ ಜಯದ ಭೂಪನಿಗೆ
ಸೋಲಿನ ಭಯವಂತೆ;
ಹಾಗಾದರೇ ಸೋತವನೇ ಧೀರನೇ??.. 

-ದಿವ್ಯ ಆಂಜನಪ್ಪ
08/08/2013

ಚುಟುಕು

ಬರೆಯಬೇಕೆಂದು ಬರೆದರೆ
ಅರ್ಥಕ್ಕಿಂತ ಅನರ್ಥವೇ ಹೆಚ್ಚು.
ಹಾಗೆಯೇ ಪ್ರೀತಿ ನಟಿಸಿದರೆ,
ಪ್ರೀತಿ ಸಿಗಬಹುದು ಆದರೆ
ಪ್ರೀತಿ ದಕ್ಕಲು ಪ್ರೀತಿ ಬೇಕು. 

-ದಿವ್ಯ ಆಂಜನಪ್ಪ 
08/08/2013

ಚುಟುಕು

ಎನ್ನಾತ್ಮವ ಧಗಧಗನೇ ಉರಿಸಿ,
ತಣಿಯುವ ಮನವೇ,
ಉರಿಸು ಇನ್ನಷ್ಟು ಉರಿಸು,
ಬೂದಿಯಾದರೆ ತಾನೇ
ನೀ ಅದರೊಳು ಹೊರಳಾಡಲು ಸಾಧ್ಯ.

-ದಿವ್ಯ ಆಂಜನಪ್ಪ
08/08/2013

ಚುಟುಕು

"ಹಾಗೆ ಸುಮ್ಮನೆ"

ನಿನ್ನ ಸೋಕಿದ
ಗಾಳಿಗಳಿಗೆಲ್ಲಾ 
ಛೂ ಮಂತ್ರ
ನನ್ನ ಪ್ರೀತಿ 

-ದಿವ್ಯ ಆಂಜನಪ್ಪ 
08/08/2013

Wednesday, 7 August 2013

ಕವನ

ಪುಟಿಯುವ ಚೆಂಡು
ಮನದೊಂದು ಮಾದರಿ,
ಒತ್ತಿದ್ದಷ್ಟೂ ಪುಟಿಯಲು
ಹವಣಿಸುವಂತಹುದು.
ದಿಕ್ಕೆಟ್ಟು ಚಿಮ್ಮುವುದು
ತರವಲ್ಲವಾದರೂ
ಒತ್ತಡವ ತಾ ತಾಳಲಾರದು.
ಸುತ್ತಲಿನವರು ಹೇರುವ
ಒತ್ತಡವ ಬುದ್ಧಿಯು ತಡೆವಂತಾಗಲಿ,
ತನ್ನ ಮನದ ಮೇಲೆ
ಒತ್ತಿನ ಗುರುತಾಗದಂತಾಗಲಿ
ನಮ್ಮ ಚೆಂಡು
ನಮ್ಮ ಕೈಲಿ ಮಾತ್ರ.
ಹಾಯಾಗಿ ಮೃದುವಾಗಿ.

-ದಿವ್ಯ ಆಂಜನಪ್ಪ
08/08/2013

ಚುಟುಕು

ಇರುಳ ಕನಸಲಿ
ನೀ ಹಿಡಿದ ದೀಪ
ಕಣ್ಬಿಟ್ಟಾಗ ಬಾನೇರಿದ
ಭಾನು ಹೊಳೆದನು.

-ದಿವ್ಯ ಆಂಜನಪ್ಪ
07/08/2013

ಹನಿಗವನ

"ಬಾಳು"

ಬಾಂಧವರಿದ್ದು ಜೀವಿಸುವರು
ಕೆಲವರು,
ಬಾಂಧವರಿಲ್ಲದೇ ಜೀವಿಸುವರು
ಮತ್ತೂ ಕೆಲವರು,
ಬಾಂಧವರಿದ್ದೂ ಇಲ್ಲದಂತೆ ಬಾಳುವರು
ಹಲವರು.......
ಯಾರಿದ್ದರೂ ಇಲ್ಲದಿದ್ದರೂ
ಬಾಳು ನಮಗದು ಮುಖ್ಯ............. :-)

-ದಿವ್ಯ ಆಂಜನಪ್ಪ

೦೭/೦೮/೨೦೧೩

ಚುಟುಕು

ಎನ್ನ ಭಾವಗಳ 
ಬಂಧಿ ನೀ,
ಭಾವ ಮೀರಿ
ಬದುಕಾಗೆಯಾ?

-ದಿವ್ಯ ಆಂಜನಪ್ಪ
07/08/2013

Tuesday, 6 August 2013

ಚುಟುಕು

ಕನಸಂತೆ ಕಾಡುವ
ಶಪಿಸಿದರೂ ಮನಸ ಕೂಡುವ
ಹೊರಟನೆಂದರೂ
ಬೆನ್ನ ಹಿಂದೆಯೇ ನಿಲುವ
ಬೆಳಕಿನಲಿ ಚೆಲ್ಲಾಟವ
ಕತ್ತಲೆಯಲಿ ಸಲ್ಲಾಪವ
ನಡೆಸುವವ ನಲ್ಲ.
ಎಂದೂ ದೂರಾಗದ
ನನ್ನ ಛಾಯೆ.

-ದಿವ್ಯ ಆಂಜನಪ್ಪ 
06/08/2013

Monday, 5 August 2013

ಚುಟುಕು

ಮನಸು
ಕನಸು
ಮೌನ
ಯಾನ
ಚಿರ ನೂತನ 

05/08/2013

ಹನಿಗವನ

"ಕಾಡುವಂತಹುದು"

ಆಗಾಗ ಕಾಡುವ ವ್ಯಥೆಗಳಿಗೊಂದು
ಕಥನ ರೂಪಿಸಿ,
ಪುಟಗಳ ಅಕ್ಷರಗಳಲಿ
ಬಂಧಿಸಬೇಕೆಂದುಕೊಳ್ಳುವೆಯಷ್ಟೇ,
ಬರೆದಷ್ಟೂ ನೆನೆವೆ
ನೆನೆದಷ್ಟೂ ನೊಯ್ಯುವೆ
ಅದು ಕಾರಣ ಮರೆವೆ
ಆ ನೆನಪನು,
ಮೆರೆವೆ ಇಂದಿನ ಹೊಳಪನು,
ಕಾಲವು ಯಾರಿಗೂ ಕಾಯದು
ಮುನ್ನೆಡೆಯದಿದ್ದರೆ ದೂಷಿಸದೆ ಬಿಡದು.

-ದಿವ್ಯ ಆಂಜನಪ್ಪ
05/08/2013
 — feeling lonely.

Sunday, 4 August 2013

ಚುಟುಕು

ಜೀವಂತಿಕೆಗಳು


ಪ್ರೇರಣೆ ನನ್ನಕ್ಕನ ಮಕ್ಕಳು



ನಿಜವಾಗಿಯೂ ಜೀವನ ನಿರುತ್ಸಾಹವೆನಿಸಿದಾಗ

ಬೇಕೆನಿಸುವುದು ನಾವಿದ್ದ ಹಾಗೆ

ಸ್ವೀಕರಿಸುವ ಜೀವಂತಿಕೆಗಳು.

ಅದು ಮಾತ್ರವೇ ನಮ್ಮ ಪ್ರೀತಿಯನ್ನಷ್ಟೇ

ಬಯಸುವ ಮುದ್ದು ಮುದ್ದು ಮಕ್ಕಳು..  


-ದಿವ್ಯ ಆಂಜನಪ್ಪ

04/08/2013

Saturday, 3 August 2013

ಚುಟುಕು

ಜೀವನವು ಪ್ರೀತಿಸುವಾಗ
ಉಸಿರಾಗುವ ಕನಸು,
ಜೀವನವನ್ನು ಪ್ರೀತಿಸುವಾಗ
ಹಸಿರಾಗುವ ಮನಸು,
ಕನಸು ಮನಸಿಗೆ ಸೂಗಸು
ಗೆಳತನ ಕೊಟ್ಟ ಈ ಹೊಸತು.,

HAPPY FRIENDSHIP DAY

- ದಿವ್ಯ ಆಂಜನಪ್ಪ 
04/ 08/2013

ಚುಟುಕು

ಹಾಗೇ ಸುಮ್ಮನೆ 

ಕನಸು ಕದ್ದರೂ ಸರಿ,
ಮನಸ ಕದಿಯಬಾರದಿತ್ತು.
ಮಾತು ಕದ್ದರೂ ಸರಿ,
ಮೌನ ಕದಿಯಬಾರದಿತ್ತು.
ಕನಸು-ಮನಸು-ಮಾತು-ಮೌನ
ಎಲ್ಲವೂ ಅವನ ಕೈವಶ.
ಪರವಶಳಾದೆನೂ............. 


-ದಿವ್ಯ ಆಂಜನಪ್ಪ
03/08/2013

ಚುಟುಕು

ಅಡಿಗಡಿಗೂ ಸೋಲುವ
ಪ್ರೀತಿಯಿರಲು
ಸೋಲಿಲ್ಲದ ಸರದಾರ.
ಅನುಸರಿಸುವ ಪ್ರೀತಿ ಕಳೆದು
ಸೋಲೇ ಆಧಾರ

-ದಿವ್ಯ ಆಂಜನಪ್ಪ
03/08/2013

ಚುಟುಕು

ಕೊಬ್ಬಿದವರಿಗೆ 
ಉಬ್ಬಿದ ಪ್ರೀತಿ
ತಗ್ಗಿದವರಿಗೆ 

ಕೊಬ್ಬಿದವರ ಭೀತಿಯಷ್ಟೇ 

03/08/2013

ಚುಟುಕು

ದನಿ ಹುಟ್ಟುತ್ತಿಲ್ಲ
ಎಲ್ಲಾ ಪದಗಳೇ,
ಭಾವ ವಂಚಿತ ಮನ
ಮಿಸುಕಾಡಿದೆ ನಿನ್ನ ಪ್ರೇಮಕೆ.

03/08/2013

Friday, 2 August 2013

ಹನಿಗವನ

ಹಾಗೇ ಸುಮ್ಮನೇ.......

ಕೆಲಮಂದಿ ಕಾಯ್ವರು 
ಪರರ ನಡೆ-ಫಲಕ್ಕಾಗಿ,
ಅದನ್ನೆತ್ತಾಡಿ; ಧೂಳಾಗಿ 
ಕೇರ್ವರು,
ಮತ್ತೆ ಕೆಲವ ತಿರುಚಿ
ಹೇಳ್ವರು,
ಪರ ನಿಂದೆಯೇ
ಪರಮೋಚ್ಚಗುರಿಯಾಗಿ
ಜೀವಿಸುವರು,
ಸತತ ಪರರ ಸವಿಜೇನಿನಲ್ಲಿ
ತಾ ಕೀಟವಾಗಿ.
ಏನ ಹೇಳಲಿ ತಂದೆ?
ಕಾಯಕವೇ ಕೈಲಾಸ.

-ದಿವ್ಯ ಆಂಜನಪ್ಪ
02/08/2013

ಚುಟುಕು

ಕನಸಿನ ಭಾವಗಳ
ಮನಸಿನ ವಾಂಛೆಗಳ
ಅರಿಯದ ಸಹಜ ಮನುಜ,
ಅರಿತು ನುಡಿದಾಗ 
ಹುಚ್ಚನೆಂದಾದ...

-ದಿವ್ಯ ಆಂಜನಪ್ಪ
02/08/2013

ಹನಿಗವನ

ಉಷೆಯಲಿ ನಿಶೆಯ ಕನಸು,
ನಿಶೆಯಲಿ ಉಷೆಯ ಕನಸು,
ಒಂದು ಹಗಲುಗನಸು,
ಮತ್ತೊಂದು ರಾತ್ರಿಯದು.
ಉಷೆಯಲಿ ಉಷೆಯ,
ನಿಶೆಯಲಿ ನಿಶೆಯ,
ನಶೆಯೇಕೆ ಏರದು?
ಕನಸೇಕೆ ಮೂಡದು?
ಏನಿದ್ದರೂ ಕಡೆಗಣಿಸಿ,
ಮನವೇಕೆ ಇಲ್ಲದೆಡೆಗೇ ತುಡಿವುದು??

-ದಿವ್ಯ ಆಂಜನಪ್ಪ 
೦೨/೦೮/೨೦೧೩

Thursday, 1 August 2013

ಕವನ

"ಅಳು"

ನಗುವಿಲ್ಲದ ಮಾತುಬಾರದವಳು,
ಅವಳು; ಅಳುವೇ ಕೊರಗೇ
ತುಂಬಿರಲು ಜೀವನದೊಳು,
ಮೂಗಿಯೆಂದರು ಅಳುಬುರುಕಿಯೆಂದರು
ನೋವುಗಳರಿಯದ ಜಾಣ ಕಿವುಡರು.
ಅಳುವಿಗೇ ಕೊನೆಯಿಲ್ಲವೆಂದತ್ತಳು.
ಅಳುವೊಂದೇ ಜೊತೆಯಾಗಿ
ಕೊನೆಗೆ ಅಳುವೇ ಬೇಸರವೆನಿಸಲು,
ತೊರೆದೆಬಿಟ್ಟಲು ಅಳುವಿನೊಂದಿಗೆ ಕೊರಗನ್ನೂ...
ಮರುಹುಟ್ಟು ಪಡೆವಂತೆ.
ಈಗಲೂ ಅಳುವಳು ಆದರೆ ಕಣ್ಣೀರಿಲ್ಲ,
ಕಣ್ಣೀರಿಗೆ ಸಮಯವಿಲ್ಲ, ಜಿನುಗಿದರೂ
ತ್ವರಿತದಿ ಆವಿಯಾಗುವವು ಕಾಣದೆ,
ಕ್ಷಣ ಕಾಲ ಮಿಂಚಿ ಹೋಗುವ ನೆನಪಿನಂತೆ.
ಈ ವಿಸ್ಮಯಕೆ ನಗು ತುಂಬಿದೆ ಕಣ್ಗಳನು
ಕಾಂತಿ ತುಂಬಿದೆ ತುಟಿಗಳಲಿ
ಬದುಕು ತುಂಬಿದೆ ಜೀವನದಲಿ.
ಅವಳೇ ತುಂಬಿಕೊಂಡಳು ಅವಳಲಿ.

-ದಿವ್ಯ ಆಂಜನಪ್ಪ 
01/08/2013