Saturday, 10 August 2013

ಹನಿಗವನ

ಪ್ರಿಯಕರೆಯೊಂದು ಕೇಳಿ ಬಂದು,
ಹರ್ಷಿಸಿ ಕರೆದೆಡೆಗೆ ತಾನೂ ಕೂಗಿ;
ಆ ಪ್ರತಿ ಕೂಗೇ ತನ್ನೊಳ ಒಲವೆಂದು,
ಓಡೋಡಿ ಹೋಗಿ ನೋಡಲು;
ಅದೇ ಕಡಿದಾದ ಪ್ರಪಾತ...
ಮುಖದಿಂದಿಳಿದ ಬೆವರ ಹನಿಗಳೇ
ಎಚ್ಚರಿಸಿ ಅರಿವು ಮೂಡಿಸಿದವು
ಮೊದಲ ಕರೆಯೊಂದು ಭ್ರಮೆ
ಎರಡನೇಯದು ಅದು ನಿನ್ನದೇ ಪ್ರತಿಧ್ವನಿ.

-ದಿವ್ಯ ಆಂಜನಪ್ಪ
28/07/2013

2 comments:

  1. ತುಂಬ ಇಷ್ಟವಾಯಿತು...
    ನನ್ನದೇ ಭಾವವೆನ್ನಿಸಿ...

    ReplyDelete