Thursday, 1 August 2013

ಕವನ

"ಅಳು"

ನಗುವಿಲ್ಲದ ಮಾತುಬಾರದವಳು,
ಅವಳು; ಅಳುವೇ ಕೊರಗೇ
ತುಂಬಿರಲು ಜೀವನದೊಳು,
ಮೂಗಿಯೆಂದರು ಅಳುಬುರುಕಿಯೆಂದರು
ನೋವುಗಳರಿಯದ ಜಾಣ ಕಿವುಡರು.
ಅಳುವಿಗೇ ಕೊನೆಯಿಲ್ಲವೆಂದತ್ತಳು.
ಅಳುವೊಂದೇ ಜೊತೆಯಾಗಿ
ಕೊನೆಗೆ ಅಳುವೇ ಬೇಸರವೆನಿಸಲು,
ತೊರೆದೆಬಿಟ್ಟಲು ಅಳುವಿನೊಂದಿಗೆ ಕೊರಗನ್ನೂ...
ಮರುಹುಟ್ಟು ಪಡೆವಂತೆ.
ಈಗಲೂ ಅಳುವಳು ಆದರೆ ಕಣ್ಣೀರಿಲ್ಲ,
ಕಣ್ಣೀರಿಗೆ ಸಮಯವಿಲ್ಲ, ಜಿನುಗಿದರೂ
ತ್ವರಿತದಿ ಆವಿಯಾಗುವವು ಕಾಣದೆ,
ಕ್ಷಣ ಕಾಲ ಮಿಂಚಿ ಹೋಗುವ ನೆನಪಿನಂತೆ.
ಈ ವಿಸ್ಮಯಕೆ ನಗು ತುಂಬಿದೆ ಕಣ್ಗಳನು
ಕಾಂತಿ ತುಂಬಿದೆ ತುಟಿಗಳಲಿ
ಬದುಕು ತುಂಬಿದೆ ಜೀವನದಲಿ.
ಅವಳೇ ತುಂಬಿಕೊಂಡಳು ಅವಳಲಿ.

-ದಿವ್ಯ ಆಂಜನಪ್ಪ 
01/08/2013

2 comments:

  1. ಹಲವು ಹೆಣ್ಣೂ ಮಕ್ಕಳ ಬದುಕಿನ ಚಿತ್ರಣ,
    ಅಳುವಿಗೇ ಕೊನೆಯಿಲ್ಲವೆಂದತ್ತಳು :(

    ReplyDelete