ಈ ದಿನ ಫೇಸ್ ಬುಕ್ನಲ್ಲಿ ಎಲ್ಲರೂ ತಮ್ ತಮ್ಮ ಅಣ್ಣತಮ್ಮಂದಿರ ಫೋಟೋಗಳನ್ನು ಹಾಕ್ತಾ ಇದ್ದಾರೆ, ನನಗೆ ಈಗ ಸುಮ್ನಿರೋಕ್ ಆಗ್ತಾ ಇಲ್ಲ,,
ನನಗಿರುವ ಏಕೈಕ ತಮ್ಮನ ಫೋಟೋ (ಫೇಸ್ ಬುಕ್ಕಿನ ತಮ್ಮಂದಿರನ್ನು ಹೊರತುಪಡಿಸಿ ) ಇಂದು ಹಾಕೋ ಮನಸ್ಸಾಗಿದೆ...
ಇಷ್ಟು ದಿನಗಳು ನಾನು ಏನೊ ಒಂದಷ್ಟು ಬರೆದೋ, ಇಲ್ಲವೋ ಬೆರೆತೋ ನಿಮ್ಮನೆಲ್ಲಾ ಗಳಿಸಿದ್ದೇನೆ. ಇಷ್ಟು ದಾರಿಯನ್ನು ಸಾಗಿ ಬರಲು ಮೊದಲ ಹೆಜ್ಜೆ ಎಂದಿರುತ್ತದೆ ಅಲ್ಲವೇ? ಹಾಗೆಯೇ ಮೊದಲ ಹೆಜ್ಜೆಯಿಡಲು ಈ ನನ್ನ ತಮ್ಮನು ನನಗೆ ಸಹಕಾರಿಯಾಗಿದ್ದನು. ನಾನು, ಕಂಪ್ಯೂಟರ್ ಗಂಧ-ಗಾಳಿ ಗೊತ್ತಿಲ್ಲದವಳು. ಸುಮ್ಮನೆ ಕೇಳಿದೆ ಎಂದು ಫೇಸ್ ಬುಕ್ ಅಕೌಂಟನ್ನು ತೆರೆದು ಕೊಟ್ಟು, ಹೇಗೆ ನಿರ್ವಹಿಸಬೇಕು ಎಂದು ಹೇಳಿಕೊಟ್ಟವನು ಇವನೇ, ಈಗ ಫೇಸ್ ಬುಕ್ ವಿಚಾರದಲ್ಲಿ ಅವನನ್ನೇ ಮೀರಿಸುತ್ತೇನೆ, ಅದು ಬೇರೆ ವಿಚಾರ ಬಿಡಿ
ಇಲ್ಲಿ ನೋಡುತ್ತಾ ನೋಡುತ್ತಾ ನಾನೂ ಬರೆಯಲು, ಸ್ವಂತದೊಂದು ಲಾಪ್ ಟಾಪ್ ತೆಗೆದುಕೊಳ್ಳೋ ಆಸೆಯಾಯಿತು. ಅದಕ್ಕೂ ಮಾರ್ಗದರ್ಶಕನು ಇವನೇ,, ತಂದ ಲಾಪ್ಟಾಪ್ನಿಂದ ಏನೂ ಕೆಲಸ ಮಾಡಲಾಗದೆ ಸುಮ್ಮನಿದ್ದೆ. ಕನ್ನಡವಷ್ಟೇ ನನಗೆ ಬೇಕಾದ್ದು,, ನನಗಾಗ ನುಡಿ, ಪದ ಇದ್ಯಾವುದರ ಪರಿಚಯವಿರಲಿಲ್ಲ, (ನುಡಿ ಈಗಲೂ ಕಲಿತಿಲ್ಲ). ಕನ್ನಡ ಟೈಪಿಂಗ್ ತಿಳಿಯದ ನಾನು ಸರಳವಾಗಿ ಕನ್ನಡವನ್ನು ಟೈಪ್ ಮಾಡಲು ಸಹಾಯವಾಗುವಂತೆ ಪೇಪರ್ನಲ್ಲಿ ಬಂದ ಮಾಹಿತಿ ಸಂಗ್ರಹಿಸಿ "ಪದ''ವನ್ನು ನನ್ನ ಲಾಪ್ಟಾಪಿಗೆ ಇನ್ಸ್ಟಾಲ್ ಮಾಡಿಕೊಟ್ಟ,, ನಾನು ಬರೆಯುವಂತೆ ಅನುಕೂಲವನ್ನು ಮಾಡಿಕೊಟ್ಟನು. ಅದೂ ನಾನೇನೂ ಕೇಳದೆ,,, ನಾನೇನೂ ಹೇಳದೆ ನನ್ನ ಮನಸ್ಸನ್ನು ಹೀಗೆ ಅರ್ಥಮಾಡಿಕೊಂಡು ಬೇಕಿದ್ದನ್ನು ಮುಂದಿರಿಸಿದ್ದ ನನ್ನ ತಮ್ಮ,,! ತುಂಬಾ ಖುಷಿಯಾಗಿತ್ತು ಅಂದು,,,, ಇಂದಿಗೂ,,,,,
ಚಿಕ್ಕವನಿದ್ದಾಗಷ್ಟೇ ಇವನಿಗೆ ರಾಖಿಯನ್ನು ತಂದು ಕಟ್ಟುತ್ತಿದ್ದೆ. ಇವನು ಹುಟ್ಟೋ ಮೊದಲು ನನ್ನ ದೊಡ್ಡ ಅಕ್ಕಂದಿರಿಗೇ ಕಟ್ಟಿ ದುಡ್ಡು ವಸೂಲಿ ಮಾಡುತ್ತಿದ್ದೆ..
ಪ್ರತೀ ವರ್ಷ ರಾಖಿ ಹಬ್ಬದಂದು ಇವನಿಗೆ ಮತ್ತೂ ಇವನಿಗಿಂತ ಚಿಕ್ಕವಳು ನನ್ನ ತಂಗಿಗೂ ರಾಖಿ ಕಟ್ಟಿ ಖುಷಿಪಡುತ್ತಿದ್ದೆ. ಹಾಗೆಯೇ ನನ್ನ ಬಾಲ್ಯ ಸ್ನೇಹಿತನೊಬ್ಬ 'ಸಾಧಿಕ್'ನಿಗೂ ಕಟ್ಟುವುದು ನನ್ನ ಬಾಲ್ಯದ ಸಂತಸಗಳು..
ಈ ಭಾವಚಿತ್ರವು ಎರಡು ಮೂರು ವರ್ಷದ ಹಿಂದಿನದ್ದು,, ಚೂರ್ ಮುದ್ಮುದ್ದಾಗಿದ್ದಾನೆ,, ಈಗಿನದ್ದು ಹಾಕಲು ದೃಷ್ಟಿಗಳ ಭಯ!
''ಕೃಷ್ಣ''ನೆಂದು ಚಿಕ್ಕದಾಗಿ ಕರೆಯುತ್ತೇವೆ. ಪೂರ್ಣ ಹೆಸರು ತುಸು ಉದ್ದವೇ ನನ್ನ ತಮ್ಮನದು,, !!
ದೊಡ್ಡವರಾದಂತೆ ವಿಚಾರಗಳೂ ತಿರುವುಗಳು ಯೋಚನಾಲಹರಿಗಳೂ ಹೊಸತನವನ್ನು ತಂದುಕೊಳ್ಳುತ್ತಾ ಹೋಯಿತು.. ಈಗ ಈ ಆಚರಣೆಗಳನ್ನು ಆಶಯಗಳಾಗಿ ಬದಲಿಸಿದ್ದೇನೆ.
ಇಂದು ನನ್ನ ತಂಗಿ ಅಣ್ಣನಿಗೆ ರಾಖಿ ಕಟ್ಟಿದ್ದಾಳೆ, ಎಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುವೆ ಎಂದು ಹೇಳುತ್ತಿರುವ ತಮ್ಮನಿಗೆ ಈ ವರ್ಷ ಅವನ ಆಕಾಂಕ್ಷೆಯ ಕೆಲಸವೇ ಸಿಗಲೆಂದು ಹರಸಿದೆನು... :-)
10/08/2014

No comments:
Post a Comment