Monday, 13 January 2014
Sunday, 12 January 2014
Saturday, 11 January 2014
ಕಿರು ಲೇಖನ
ಒಂದು ನೋಟ;
ಆ ಅಕ್ಕ ತಂಗಿಯರು ಹರಟುತ್ತಿದ್ದರು ಅದೂ ಇದೂ ಇನ್ನೂ ಏನೇನೋ. ಅವುಗಳ ಮಧ್ಯೆ ಸಮಾಜದ ಬಗೆಗಿನ ತಂಗಿಯ ಆಪಾದನೆಗಳು ಶುರುವಾದವು. ವೃತ್ತಿ ಬದುಕಿನ ಸವಾಲುಗಳು, ಸಹೋದ್ಯೋಗಿಗಳ ಕಿರಿಕಿರಿ, ಜಾತಿ ಭೇದ, ಲಿಂಗ ತಾರತಮ್ಯ, ಮದುವೆ ಇತ್ಯಾದಿ.
ಎಲ್ಲೆಲ್ಲೋ ಸುತ್ತಿ ಕೊನೆಗೆ ಮದುವೆ ವಿಚಾರಕ್ಕೆ ಬಂದು ನಿಂತಿತ್ತು ಅವರ ಚರ್ಚೆ. ಇತ್ತೀಚಿಗಷ್ಟೇ ಮದುವೆಯ ಬಗ್ಗೆ ಆಸಕ್ತಿ ತೋರಿದ್ದ ತಂಗಿ, ತನಗೆ ಬಂದ ಗಂಡುಗಳ ಗುಣಗಾನ ಶುರುವಿಟ್ಟಳು. ಒಟ್ಟಿನಲ್ಲಿ ಮದುವೆ ಅನ್ನುವುದು ಅನಿವಾರ್ಯವಲ್ಲದ ವಿಚಾರ ಎಂಬುದು ಅವಳ ಮನೋಭಾವ.
"ಅವರ್ಯಾರೂ ಕಣೆ, ಎಲ್ಲಾ ಸರಿ ಅವರ ಹೇಳಿಕೆ ಏನಿತ್ತು ಗೊತ್ತಾ? ಯಾವುದೇ ಕಾರಣಕ್ಕೂ ಯಾವುದೇ ಬೆಲೆಯಲ್ಲೂ ಗಂಡನನ್ನು ತೊರೆಯಬಾರದು, ಅಂತ ಮ್ಯಾಟ್ರಿಮೋನಿ ಫ್ರೋಫೈಲ್ ನಲ್ಲಿ ಹಾಕ್ಕೊಂಡಿದ್ದಾರೆ", "ಅದಕ್ಕೆ ನನಗೆ ಇಷ್ಟವಾಗಲಿಲ್ಲ ಬಿಟ್ಟಾಕ್ದೆ".
ತಂಗಿಯ ಮುಗ್ಧತೆಗೆ ನಕ್ಕ ಅಕ್ಕಾ ಹೇಳತೊಡಗಿದಳು, "ನಿನಗೆ ಗೊತ್ತಿರಬಹುದು ಆದರೂ ಹೇಳ್ತೀನಿ, ನಾಲ್ಕು ಜನ ಕುರುಡರನ್ನು ಒಂದು ಆನೆಯ ಹತ್ತಿರ ಕರೆದೊಯ್ದು, ಮುಟ್ಟಿ ನೋಡಿ ನಂತರ ಆನೆಯನ್ನು ವರ್ಣಿಸಿ ಎಂದು ಹೇಳಿದರೆ, ಹುಟ್ಟು ಕುರುಡರು ಎಂದೂ ಆನೆಯನ್ನು ನೋಡದವರು ಏನು ಹೇಳಬಹುದು?.
ಆನೆ ಎಂದರೆ; ಒಬ್ಬ ಕಿವಿ ಮುಟ್ಟಿ ವಿಶಾಲ ಅಂತಾನೆ, ಒಬ್ಬ ಬಾಲ ಮುಟ್ಟಿ ನೀಳ, ಒಬ್ಬ ಹೊಟ್ಟೆ ಸ್ಪರ್ಶಿಸಿ ಉಬ್ಬಿದಂತೆ, ಮತ್ತೊಬ್ಬ ಸೊಂಡಿಲಿಡಿದು ಮತ್ತೇನನ್ನೋ ಹೇಳುತ್ತಾನೆ. ಅವೆಲ್ಲವೂ ಅವರ ಕಲ್ಪನೆಗಳಷ್ಟೇ. ವಾಸ್ತವ ಬೇರೆಯೇ ಇರಬಹುದು. ಆದರೆ ಅವರವರ ಅನುಭವಕ್ಕೆ ತಕ್ಕಂತೆ ಅವರ ನಂಬಿಕೆಗಳು ಬೆಳೆಯುತ್ತದೆ",
"ಇಲ್ಲಿ ಆತ ನೋಡಿದ ಹೆಣ್ಣನ್ನು ವರ್ಣಿಸಿದ್ದಾನೆ, ಇದರಲ್ಲಿ ಆತನದ್ದು ಪಡೆದ ಅನುಭವವಷ್ಟೇ" ಎಂದು ತಿಳಿಸಿ ಹೇಳುವಳು ಅಕ್ಕ.
ಆನೆಯ ಕತೆಯು ತಂಗಿಗೂ ತಿಳಿದಿತ್ತು ಆದರೆ ಈ ಸಂದರ್ಭಕ್ಕೆ ಅನ್ವಯಿಸಿದ್ದು ಸೋಜಿಗವೆನಿಸಿ, ಏನೋ ಹೊಳೆದಂತೆ "ಸರಿ" ಎಂದು ನಸು ನಗುತ್ತಾಳೆ.
ಹೌದಲ್ಲವೆ ಸ್ನೇಹಿತರೆ? ಅವರವರ ಕುರುಡುತನದಿ ಹೆಣ್ಣು, ಗಂಡು, ಪ್ರೀತಿ, ಬದುಕು, ದೇಶ, ಸ್ವಾತಂತ್ರ್ಯ ಇತ್ಯಾದಿಗಳು ಅರ್ಥ ಕಂಡುಕೊಳ್ಳುತ್ತವೆ. ಒಬ್ಬರಿಗೆ ಅತಿಯಾದದ್ದು ಮತ್ತೊಬ್ಬರಿಗೆ ಯಕಃಶ್ಚಿತ್ ಆಗಿ ಕಾಣುತ್ತದೆ. ನಮ್ಮ ಅನುಭವಕ್ಕೂ ಮೀರಿದ ಸತ್ಯವಿರಬಹುದು. ಅರಿಯುವ, ಅನ್ವೇಷಿಸುವ ಮತ್ತು ನಂಬುವ ಮನಸ್ಸಿರಬೇಕು......
ಧನ್ಯವಾದಗಳು
ದಿವ್ಯ ಆಂಜನಪ್ಪ
11/01/2014

ಬದುಕಲು ಶುರುವಿಟ್ಟೆನೀಗ
ನಿನ್ನ ಮನವನರಿತು,
ಅರಸಿ ಬಂದ ನನಗೆ
ಅದರೊಳು ನನ್ನ ನೀ ತೆರೆದಿಟ್ಟಾಗ!
***
ಪ್ರತೀ ಅವಮಾನಗಳ ಕೊನೆ ಕ್ಷಣಗಳು
ನಗುವಿನೊಂದಿಗೆ ನಿಲ್ಲುವಾಗ
ನನಗೆ ನಾ ಪರಕೀಯಳಾಗಿ
ಅವಮಾನಗಳ ಪರವಹಿಸುವ ನಾನು
ಕೆಲವೊಮ್ಮೆ ನಾನೇ ಅಲ್ಲದ ನಾನು,
ಆ ಕ್ಷಣವ ಮೀರುವುದೇ ನನಗೊಂದು ಪರೀಕ್ಷೆ
ದಾಟಿ ಮುನ್ನೆಡೆದ ಮೇಲೆ
ಎಲ್ಲಾ ಎಲ್ಲೆಗಳ ಮೀರಿ ನಡೆಸೋ ನಾನೇ ನನ್ನ ಸಾರಥಿ!
***
ನೀ ನನ್ನೊಳ ಕನಸ ಪತ್ತೆ ಹಚ್ಚಲೆಂದು
ನಾ ನಿನಗಾಗಿ ಮಾತು ಹರಿಸಿದೆ,
ಭಾವಗಳಂಕೆ ಮೀರಿದೆ,
ಹಗಲು ಮರೆತರೂ
ನಿನ್ನ ಕೈಯೊಳಿಟ್ಟೆ ರಾತ್ರಿಗಳ ನಿದಿರೆಯ!
***
ಕೆಲವು ಅರ್ಥವಾಗಬಾರದು
ಅರ್ಥವಾದದ್ದು ಮತ್ತೆ ಅರ್ಥೈಸಿ ಒರೆ ಹಚ್ಚಲು ಹೋಗಬಾರದು
ಅರ್ಥವಾಗದಕ್ಕೆ ಕೊರಗಿ ಕೂರಬಾರದು
ಅರ್ಥವಾದದ್ದ ಬಿಟ್ಟುಕೊಡಬಾರದು!
10/01/2014
Thursday, 9 January 2014
ಚಂದಿರ
ರಂಗಮಂದಿರದೊಳು ಚಂದಿರ ವಿರಾಜಿಸಿದ್ದಾನೆ
ಕನ್ನೆಯರ ಕೆನ್ನೆಯಿಂದಿಳಿದು
ಕಣ್ಮಣಿಗಳ ಕಣ್ತಪ್ಪಿಸಿ
ಊರ ಹೊರಗೆಲ್ಲೋ ಮಂದಿರದೊಳು
ಕಣ್ಮುಚ್ಚಿ ಮೈಮರೆತ್ತಿದ್ದಾನೆ
ಕಳ್ಳ ಚಂದಿರನ ಹುಡುಕದಿರುವಳೇ ನಾನು
ಇಗೋ ನೋಡಿ ಹಿಡಿದು ತಂದೆ
ರಂಗಮಂದಿರದ ಗಾಳಿ ಸೋಕಿ
ಇವನದೂ ಒಂದು ನಿದ್ರಿಸುವ ಅಭಿನಯವಂತೆ
ನಾ ಹುಡುಕಿ ಬರಲೆಂದು,
ಅವನ ನಿರೀಕ್ಷೆಯೇ ಹಾದಿ ಎನಗೆಂದು ತಿಳಿದೂ
ಕಾಡುವನು ಕಣ್ಮರೆಯಾಗಿ
ಸಿಕ್ಕಿ ಬಿದ್ದನೀಗ ನೋಡಿ
ರಂಗಮಂದಿರದೊಳು ಚಂದಿರ ವಿರಾಜಿಸಿದ್ದಾನೆ
ನೀ ನನ್ನ ಚಂದಿರನ ಸೋಲಿಸಿ
ಎನ್ನ ಮನಗೆದ್ದ ಮನಮೋಹನ
ಕಲ್ಪನೆಗಳ ಕಲ್ಪವೃಕ್ಷ!!!
***
ಬದುಕೊಂದು ಭಾವಗೀತೆ
ಆಗುವ ಮುನ್ನ
ಕೆಟ್ಟಿತ್ತೇಕೆ
ನಿನ್ನರ್ಥ?!
***
'ದಲಿತ'
ಎಂದೊಡನೆ,
ಮನದೊಳು ಪ್ರತಿಫಲಿತ
ಭಾವ;
ನೋವುಗಳೊಡನೆ ಕಲಿತು
ಬದುಕ ರಂಗದೊಳು
ಬಲಿತ!
09/01/2014
****************************
ಭಾವವಿಲ್ಲದ ಜೀವ
ಜೀವವಿಲ್ಲದ ಭಾವ
ಮುಖಾಮುಖಿಯಾದವೊಮ್ಮೆ,
ಮಾತಿಗೂ ಹೆಚ್ಚಿತ್ತು ಕುತೂಹಲ
ಒಂದರ ಮೇಲೊಂದಕೆ,
ಕ್ಷಣ ಕಾಲ ಕಳೆದು
ಮುನ್ನೆಡೆದವು ಸುಮ್ಮನೆ
ಅರಸುತ ತಮ್ಮ ಅಭಾವವ!
***
ಹೂವೊಂದು ಕೂಗಿರಲು ದುಂಬಿಯ
ಕೇಳಿಯೂ ಕೇಳದ ಕ್ಷೀಣ ದನಿಯಲಿ,
ಝೇಂಕಾರದ ಗುಂಗೇ ಸುತ್ತ ಬೇಲಿಯೋ ಎಂಬಂತೆ;
ನಶೆ ಏರಿತೋ, ವಿಷಯ ಘಟಿಸಿತೋ
ಹೂದೋಟದಾಚೆಗೇ ಚಿಮ್ಮುವಂತೆ
ಭ್ರಮೆ ಹುಟ್ಟಿದೆ ಭ್ರಮರಂಗೆ!
***
ನಮ್ಮ ಮೌಢ್ಯತೆ ಅರಿವಾಗುವುದು
ಅದರಿಂದ ಹೊರಬಂದ ಮೇಲೆಯೇ
ಅಲ್ಲಿಯವರೆಗೂ ಅದು ಬುದ್ಧಿವಂತಿಕೆ
ಎನಿಸಿಕೊಂಡಿರುತ್ತದೆ
08/01/2014
Tuesday, 7 January 2014
ಪತ್ರ
ಚಿತ್ರಕ್ಕಾಗಿ ಹುಡುಕುತ್ತಿದ್ದೆ
ನಿನ್ನ ಪತ್ರ ಸಿಕ್ಕಿತು
ಎತ್ತಿಟ್ಟೆ, ನಕ್ಕಿತು
ತಿಳಿಯದೆ ತುಟಿ ರೇಖೆ ವಕ್ರವಾಯಿತು
ಪತ್ರದ ಮಾತುಗಳೊಮ್ಮೆ ಕುಕ್ಕಿತು
ತನ್ನ ಕೋಪ ಹತಾಶೆಗಳಿಂದ,
ಕಾಲದ ಜೊತೆಗೆ ಅಕ್ಷರಗಳೂ ಬೆಳೆವುದೇನೋ
ಭಾವಗಳೊಂದಿಗೆ;
ಅಚ್ಚಳಿಯದೆ ಉಳಿದಿದೆ ಮನದಲಿ
ಆ ನಿನ್ನ ಆಕ್ರೋಶಗಳು
ಕಳೆದದ್ದು ಪ್ರೀತಿಯೋ ನಿನ್ನ ಅಸಹನೆಯೋ ತಿಳಿಯೇ ನಾ
ಪತ್ರವಿಲ್ಲ ಎನ್ನ ಕೈಯೊಳೀಗ
ಬರೀ ನಿನ್ನ ನಿಟ್ಟುಸಿರ ಬೇಗೆಗಳಷ್ಟೇ
07/01/2014
Friday, 3 January 2014
Thursday, 2 January 2014
Wednesday, 1 January 2014
ಹೊಸ ವರುಷ
ಹಳೆ ಬಾಳು, ಹಳೆ ಹಾಡು
ಮರೆಸುವಂತೆ
ಹೊಸ ಬಾಳು, ಹೊಸ ಹಾಡು
ಹುಟ್ಟುವಂತೆ
ಹೊಸ ನೋಟ, ಹೊಸ ಘಟ್ಟ
ಅವತರಿಸುವಂತೆ
ಮನಸು ಮತ್ತೊಮ್ಮೆ ಝೇಂಕರಿಸಲಿ
ಶಾಂತಿಯಲಿ ಮಿಂದು ಪ್ರೀತಿಯಲಿ ಹೊಮ್ಮಿ
ಬದುಕೇ ಬತ್ತದ ಭರವಸೆಯಾಗಲಿ...
ತಮ್ಮೆಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು... 2014
Subscribe to:
Posts (Atom)