Tuesday, 17 September 2013

ಸಹಿಸಿದಷ್ಟೂ 
ತುಳಿವ ಜನರಿಗೆ
ನೋವಿನ ಕೂಗು
ಮನರಂಜನೆಯಂತೆ
ನೋವುಂಡು ದೂಷಿಸುವುದಕ್ಕಿಂತ
ತುಳಿವ ಕಾಲೆಳೆದು
ಮಣ್ಣು ಮುಕ್ಕಿಸುವುದು ನ್ಯಾಯವಂತೆ

(ದೌರ್ಜನ್ಯವನ್ನು ಸಹಿಸುವುದು ಒಂದು ಅಪರಾಧವೆನ್ನುವ ಹಿನ್ನೆಲೆಯಲ್ಲಿ)

ದಿವ್ಯ ಆಂಜನಪ್ಪ

17/09/2013
ಕೋಗಿಲೆಯೇ
ಮಳೆ ನಿಂತ ಮೇಲೆ
ಅದೆಲ್ಲೋ ಮರದೆಲೆ ಮರೆಯಲ್ಲಿ
ಮನದುಂಬಿ ಹಾಡುವ ನೀನು
ಹುಡುಕಿದರೂ ಕಾಣೆಯೇ;
ಭ್ರಮೆ ಎನ್ನಲಾರೆ ನೀನಿರುವುದು ದಿಟವೇ 

ದಿವ್ಯ ಆಂಜನಪ್ಪ

17/09/2013
ನಿನ್ನ
ಕನಸಿಗೆ
ನನ್ನದಿಷ್ಟು 
ಒನಪು
ಅದರ
ಕಂಪಿಗೆ
ಖುಷಿಯದು
ಸೊಂಪು! 

ದಿವ್ಯ ಆಂಜನಪ್ಪ

17/09/2013
ತನ್ನ ತಾ ಒಪ್ಪಿಕೊಳ್ಳದಿರೆ
ಸಮಾಜವು ಹೇಗೆ ಒಪ್ಪೀತು?
ಇದ್ದಂತೆ ವ್ಯತಿರಿಕ್ತ 
ತಾನಿಂತು,
ಎಂದೇಳುವ ಮನಸ್ಸಿಗಿದೆ
ಕಸಿದುಕೊಳ್ಳಲಾಗದ ಶಾಂತಿ ನಿಲ್ದಾಣ!!

ದಿವ್ಯ ಆಂಜನಪ್ಪ

17/09/2013
ಕಳದದ್ದೇ ಹುಡುಕುತ್ತಿದ್ದರೆ
ಗಳಿಸಿದ್ದು ಕಳೆದೀತು
ಜೋಕೆ ಮನವೇ,
ಕಾಲವು ಕಾಯದ
ಆತುರಗಾರ 

DA
17/09/2013
ಕಾಡುವ 
ಕನಸೆಂದು
ದೂರಿ 
ದೂರವಿಟ್ಟರೂ
ನಿನ್ನ ನೆನಪಾಗಿ
ಮತ್ತೆ ಕಟ್ಟುವೆ
ನಾ 
ಅದೇ 
ಕನಸ 


17/09/2013

Monday, 16 September 2013

ಎಷ್ಟು ಗುಡ್ಡ ಹತ್ತಿಳಿದರೂ
ಮತ್ತಷ್ಟು ದೂರ ಉಳಿವ
ಅಕ್ಷಯವೇ ಆಕಾಂಕ್ಷೆ!!

ದಿವ್ಯ ಆಂಜನಪ್ಪ
16/09/2013
ಆತ್ಮಹತ್ಯೆಯ ಮುನ್ನ 
ತನ್ನಾತ್ಮವ ತಾ ಕಂಡುಕೊಂಡಿದ್ದರೆ
ಹತ್ಯೆ ಗೈಯ್ಯಲಾಗುತ್ತಿರಲಿಲ್ಲವೆನೋ?
ಪರರ ಕ್ರೌರ್ಯ ಛಾಯೆಯ ಕೊಲುವ ಭರದಲಿ

ದಿವ್ಯ ಆಂಜನಪ್ಪ

16/09/2013

Sunday, 15 September 2013

ತಗ್ಗಿ ಬಗ್ಗಿ ನೆಡೆದಾಗ
ಮೆಚ್ಚದ ಜನ
ಶಿರಸಾವಹಿಸಿ ನಿರ್ವಹಿಸಿದ ಕಾರ್ಯವ 
ಕಡೆಗಣ್ಣಲ್ಲೂ ಕಾಣದ ಜನ
ಕೊರಗಿ ಹೆಣಗುತ್ತಿದ್ದಾಗ
ಕಾರಣವೇ ನೀನೆಂದ ಜನ
ಹಂಗು ತೊರೆದು ಗಟ್ಟಿ ನಿಂತಾಗ
ಗುಮಾನಿಯ ಅನುಮಾನದ ಜನ
ಹಿಂದೆ ಬಿದ್ದಾರೋ ನಾ ನಡೆವ
ಹಾದಿಯ ಜಾಡು ಹುಡುಕುತ....... 

ದಿವ್ಯ ಆಂಜನಪ್ಪ

16/09/2013
ತನಗೆ ತಾನು ಸತ್ಯವೆನಿಸಿದರೆ
ಜಗದ ದಂಗಿಗೆ ನಾ ಹೊಣೆಯಲ್ಲ
ನನಗದರ ಪರಿವಿಲ್ಲ

ದಿವ್ಯ ಆಂಜನಪ್ಪ 

16/09/2013
ತುಂಟ ಪ್ರಶ್ನೆ.... 

ಹೋಗಲಿ ಬಿಡು
ಈ ಜನ್ಮ ಪೂರ
ನೀ ಬಲು ಕಾರ್ಯನಿರತ
ಮುಂದಿನ ಜನ್ಮದೊಳು
ಸ್ವಲ್ಪ ಬಿಡುವಿರಬಹುದಾ?? 

ದಿವ್ಯ ಆಂಜನಪ್ಪ

15/09/2013
ಹಾಗೇ ಸುಮ್ಮನೆ......... 

ಭೀಮನಂತಾಗಬೇಕಿದೆ ನೀನೀಗ
ನಾ ಬೇಡಿದ್ದಾಗಿದೆ ದೇವನಲ್ಲಿ ಭೀಮನಂತವನೇ ಬೇಕೆಂದು 

ದಿವ್ಯ ಆಂಜನಪ್ಪ

15/09/2013
ಮರೆತಿಲ್ಲ;
ನೆನಪಿದೆ
ಮರೆಯುವುದೂ ಇಲ್ಲ
ನೆನಪಿರಲಿ

ದಿವ್ಯ ಆಂಜನಪ್ಪ 

15/09/2013
ಹಿಂದೊಮ್ಮೆ ನಾನೂ ಎಂಜಿನಿಯರ್ ಆಗಬೇಕು ಅಂತ ಆಸೆಪಟ್ಟಿದ್ದೆ. ಅದರಲ್ಲೂ ಕಂಪೂಟರ್ ಎಂಜಿನಿಯರ್. ಕನಸ್ಸಲೆಲ್ಲಾ ಕಂಪೂಟರ್ಗಳೇ, ಸೀಟು ಕೂಡ ಸಿಕ್ಕುತ್ತು ಆದರೆ ಏನೇನೋ ಕಾರಣಗಳು ನನ್ನನ್ನು ಎಂಜಿನಿಯರಿಂಗ್ ಸೇರಲು ಬಿಡಲಿಲ್ಲ. ಅಪ್ಪನ ಮಾತಿನಂತೆ ಟಿ.ಸಿ.ಹೆಚ್ ಕಡೆ ಮುಖ ಮಾಡಿದೆ. ಆಗ ಇಷ್ಟ ಇರಲಿಲ್ಲ ಬಿಡಿ, ಮನಸ್ಸೆಲ್ಲಾ ಎಂಜಿನಿಯರಿಂಗ್ದೇ ಕನಸು. ಹೀಗಿದ್ದಾಗ ಮನೆ ಪಕ್ಕನೇ ಇರೋ ಡಯಟ್ ನಲ್ಲಿ ಟಿ.ಸಿ.ಹೆಚ್ ಸೀಟು ಸಿಕ್ಕಾಗ ಹೊಗಲ್ಲ ಅಂತ ಹೇಳೋಕು ಆಗಲಿಲ್ಲ. ಬೈಕೊಂಡು ಅತ್ಕೊಂಡು ಹೊಗಿದ್ದೆ ಆಗ.... 
ಮಾತ್ಮಾತಿಗೆ ಅಪ್ಪನ ಹತ್ತಿರ ನಾನೇನಾದ್ರು "ನನ್ನ ಎಂಜಿನಿಯರಿಂಗ್ ಗೆ ಸೇರಿಸ್ಲಿಲ್ಲ ನೀನಣ್ಣ" ಅಂತ ಬೇಜಾರ್ ಮಾಡಿಕೊಂಡ್ರೆ, ಅಪ್ಪ ಅಂತಾರೆ "ಆಗ ನಾನ್ ಸೇರಿಸಿದಿದ್ರೆ ಈಗ ನೀನ್ ಕವಿ ಆಗ್ತಿದ್ದಾ ??"  
ನಾನ್ ಕವಿನೋ ಕಪಿನೋ ಅಪ್ಪನ್ ಖುಷಿ ನೋಡಿ ನಂಗೂ ಖುಷಿಯಾಗುತ್ತೆ ನಕ್ಕುಬಿಡ್ತೀನಿ. ಆದ್ರೂ ನಾನ್ ಆಸೆಪಟ್ಟಿದ್ದ ಕೋರ್ಸ್ ನಾನು ಓದಲಾಗಲಿಲ್ಲ ಅನ್ನೋದು ಆಗಾಗ ಕಾಡುತ್ತೆ. 
ಕಂಪೂಟರ್ ಹುಚ್ಚೇ ಹೆಚ್ಚಿತ್ತು ಆಗ. ಕಂಪೂಟರ್ ಸೈನ್ಸ್ ತಗೊಂಡು ಎಂಜಿನಿಯರ್ ಆಗದಿದ್ರೂ ಹೋಗ್ಲಿ ಕಂಪೂಟರ್ ಆದ್ರೂ ನನ್ ಹತ್ರ ಇರ್ಲಿ ಅಂತ ಲಾಪ್ ಟಾಪ್ ತಗೊಂಡು ಈಗ ಶಾಲೆ ಬಿಟ್ರೆ ಇದರೋಳಗೇ ಮುಳಿಗೇಳ್ತಾ ಇದ್ದೀನಿ 

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ 153 ನೇ ಜಯಂತಿಯ ಶುಭಾಶಯಗಳು


15/09/2013

Saturday, 14 September 2013

ಸ್ವಾರ್ಥವಿಲ್ಲದ
ಪ್ರೇಮವಷ್ಟೇ
ಸಾಧನೆಯ
ಸ್ಫೂರ್ತಿಯಾದೀತು 

ದಿವ್ಯ ಆಂಜನಪ್ಪ :-)
14/09/2013
ಈ ಇಳೆಯೋಳು
ನಾ ಸುಖಿ
ಕಂಡು;
ಇರುವರು
ನನ್ನಂತೆ ಕೆಲವರು 


14/09/2013

ಕೆರಳುವ ಸ್ಥಿತಿಯೂ
ಮತ್ತರಳುವ ಮನೋಸ್ಥಿತಿಗೆ
ತಡಮಾಡದೆ ತಂದು ನಿಲ್ಲಿಸುವ 
ಜತನಕ್ಕೆ
ನಾ ಬೆರಗು 

ದಿವ್ಯ ಆಂಜನಪ್ಪ

14/09/2013
ಸಾಕಾಯ್ತೇನೋ ಪ್ರೀತಿಗೆ
ಪದ ಕಟ್ಟಿಸಿಕೊಳ್ಳುವ ಸಂಭ್ರಮ!


13/09/2013
ಪ್ರೀತಿಯ
ಹುಡುಕಾಟದಲ್ಲಿ
ಕೊನೆಗೆ
ಕಂಡದ್ದು
ನನ್ನಲ್ಲೇ 
ನಾನು!

ದಿವ್ಯ ಆಂಜನಪ್ಪ
 14/09/2013
ಚಿಂತನೆಗಳ 
ಮರು ಚಿಂತನೆ
ಮರು ಪರಿಶೀಲನೆ
ಮತ್ತೊಂದು 
ಆರೊಗ್ಯಕರ ಮಾರ್ಪಾಡೇ 
ಕಲಿಕೆ!

DA

14/09/2013